9 ತಿಂಗಳ ನಂತರ ಪುರಿ ಜಗನ್ನಾಥನ ದರ್ಶನಕ್ಕೆ ಅವಕಾಶ...!

ಒಂಬತ್ತು ತಿಂಗಳುಗಳ ನಂತರ  ಓಡಿಶಾದ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ʼಕೊರೊನಾ ಮುಂಜಾಗ್ರತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಕೆಲವು ದಿನಗಳ ಕಾಲ ಪುರಿಯಲ್ಲಿನ ಸ್ಥಳಿಯ ಜನರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಹೊಸ ವರ್ಷಕ್ಕೆ ಹೆಚ್ಚು ಜನರು ಒಗ್ಗೂಡುವ ಸಾಧ್ಯತೆ ಇರುವುದರಿಂದ ಜನವರಿ 1 ಹಾಗೂ 2 ರಂದು ದೇವಸ್ಥಾನವನ್ನು ತೆರೆಯಲಾಗುವುದಿಲ್ಲʼ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ..

ಈ ಹಿನ್ನಲೆಯಲ್ಲಿ ಪ್ರಸಿದ್ಧ ಮರಳು ಕಲಾವಿದರಾದ ( Sand Artist) ಸುದರ್ಶನ್‌ ಪಟ್ನಾಯಿಕ್‌ ಟ್ವೀಟ್‌ ಮಾಡಿದ್ದಾರೆ. “9 ತಿಂಗಳಗಳ ನಂತರ ಶ್ರೀ ಜಗನ್ನಾಥ ದೇವಾಲಯ ತೆರೆದುಕೊಳ್ಳತ್ತಿದೆ. ಎಲ್ಲ ಭಕ್ತಾದಿಗಳು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಕೇಳಿಕೊಳ್ಳುತ್ತೇನೆʼ ಎಂದು ಅವರು ಹೇಳಿದ್ದಾರೆ ಜೊತೆಗೆ ಅವರು ಮರಳಿನಲ್ಲಿ ರಚಿಸಿರುವ ಕಲಾಕೃತಿಯ ಸಣ್ಣ ವಿಡೀಯೋ ತುಣುಕನ್ನು ಹಾಕಿದ್ದಾರೆ.