ವೈದ್ಯರ ಭತ್ಯೆ ಪರಿಷ್ಕರಣೆ ಮಾಡಿದ ರಾಜ್ಯ ಸರ್ಕಾರ
ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್) ಮಾದರಿಯಲ್ಲಿ ರಾಜ್ಯ ಸರ್ಕಾರವು ವೈದ್ಯರ ವಿಶೇಷ ಭತ್ಯೆಯನ್ನು ಸೆಪ್ಟೆಂಬರ 1ರಿಂದಲೇ ಪೂರ್ವಾನ್ವಯವಾಗುವಂತೆ ಪರಿಷ್ಕರಿಸಿದೆ .ಎಂದು ಆರೋಗ್ಯ ಸಚಿವ ಡಾ .ಕೆ .ಸುಧಾಕರ್ ತಿಳಿಸಿದ್ದಾರೆ .
25ವರ್ಷಕ್ಕಿಂತ ಅಧಿಕ ಅವಧಿಗೆ ಸೇವೆ ಸಲ್ಲಿಸಿದ ಸೂಪರ್ ಸ್ಪೆಷಾಲಿಟಿ ವೈದ್ಯರ ತಿಂಗಳ ಭತ್ಯೆಯನ್ನು ರೂ.1.03 ಲಕ್ಷಕ್ಕೆ ಹೆಚ್ಚಿಸಲಾಗಿದ್ದು ,ವೈದ್ಯ ಸಮೂಹ ಕೊರೋನ ಸಂದರ್ಭದಲ್ಲಿ ತಮ್ಮ ಪ್ರಾಣ ವನ್ನು ಲೆಕ್ಕಿಸದೇ ಮತ್ತು ಕುಟುಂಬದವರ ಪರಿವೆಯನ್ನೂ ಮಾಡದೇ ಅವರ ಕಾರ್ಯವನ್ನು ಮಾಡಿದ್ದಾರೆ. ಹಾಗೂ ಈ ಯೋಜನೆ ವೈದ್ಯರ ಬಹುದಿನದ ಬೇಡಿಕೆಯು ಆಗಿತ್ತು ಈ ಹಿನ್ನಲೆಯಲ್ಲಿ ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.
ವರದಿ : ಬಸವರಾಜ ಹುಗಾರ ಗದಗ