ಬ್ರಿಟನ್ ನಲ್ಲಿ ಬೋರಿಸ್ ಪುನರ್ ಆಯ್ಕೆ.
ಬ್ರಿಟನ್ : ಬ್ರೇಕ್ಸಿಟ್ ಹಿನ್ನಲೆಯಲ್ಲಿ ಇಂಗ್ಲೆಂಡ್ ಪಾರ್ಲಿಮೆಂಟ್ ಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬೋರಿಸ್ ಭರ್ಜರಿ ಜಯಗಳಿಸಿದ್ದು 2 ನೇ ಬಾರಿ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ.
ಬ್ರೇಕ್ಸಿಟ್ ಜನಪ್ರಿಯತೆಯನ್ನೇ ಉಪಯೋಗಿಕೊಂಡ ಆಡಳಿತರೂಢ ಕನ್ಸರ್ವೇಟಿವ್ ಪಕ್ಷ 650 ಕ್ಷೇತ್ರಗಳ ಪೈಕಿ 365 ರಲ್ಲಿ ಜಯ ಸಾಧಿಸಿದೆ. ಇನ್ನು ಪ್ರತಿ ಪಕ್ಷ ಲೇಬರ್ ಪಾರ್ಟಿ 203 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ.
ವಿಶೇಷವೆಂದರೆ ಭಾರತೀಯ ಮೂಲದ 15 ಜನ ಬ್ರಿಟನ್ ಸಂಸತ್ ಗೆ ಆಯ್ಕೆಯಾಗಿದ್ದಾರೆ. ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್ ಕೂಡ ಪುನರ್ ಆಯ್ಕೆಯಾಗಿದ್ದಾರೆ.
ಇನ್ನು ಬೋರಿಸ್ ಅವರ ಈ ಭರ್ಜರಿ ಗೆಲುವಿಗೆ ಟ್ವೀಟ್ ಮಾಡುವ ಮೂಲಕ ಶುಭ ಕೋರಿರುವ ಪ್ರಧಾನಿ ಮೋದಿ ಭಾರತ ಮತ್ತು ಯುಕೆ ಸಂಭಂಧ ವೃಧಿಗಾಗಿ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.