ಕೇಂದ್ರ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಭರ್ಜರಿ ಗುಡ್ ನ್ಯೂಸ್ : ಶೀಘ್ರವೇ ಪಿಂಚಣಿ ಏರಿಕೆ!?
ಕೇಂದ್ರ ಸರ್ಕಾರವು ಹಿರಿಯ ನಾಗರಿಕರು, ವಿಧವೆಯರು ಮತ್ತು ಅಂಗವಿಕರಲಿಗೆ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಗಳನ್ನು ಪರಿಷ್ಕರಿಸಲು ಮುಂದಾಗಿದೆ. ಕೇಂದ್ರ ಸರ್ಕಾರವು ತನ್ನ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಗಳನ್ನು ಪರಿಷ್ಕರಿಸಲು ಮುಂದಾಗಿದ್ದು, ಇದರ ಪರಿಣಾಮವಾಗಿ ಹಿರಿಯ ನಾಗರಿಕರು, ವಿಧವೆಯರು ಮತ್ತು ಅಂಗವಿಕಲರಿಗೆ ಪಿಂಚಣಿ ನೆರವು ಏರಿಕೆಯಾಗುವ ಸಾಧ್ಯತೆ ಇದೆ. 80 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಪಿಂಚಣಿಯು ಮಾಸಿಕ 500 ರೂ. ಗಳಿಂದ 1000 ರೂ.ಗೆ ಏರಿಕೆಯಾಗುವ ಸಂಭವಿದೆ. 79 ವರ್ಷ ತನಕ ಹಿರಿಯರಿಗೆ ಪಿಂಚಣಿ ಈಗಿನ 200 ರೂ.ಗಳಿಂದ 500 ರೂ.ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲದ ಅಡಿಯಲ್ಲಿ ಈ ಯೋಜನೆಗಳ ಪರಿಷ್ಕರಣೆ ನಡೆಯಲಿದೆ. ಇನ್ನು ಈ ಪಿಂಚಣಿ ಯೋಜನೆಗಳ ಮೊತ್ತ ಏರಿಸುವುದು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ಜಮೆ ಮಾಡುವುದು. ಪ್ರಸ್ತಾಪದ ಉದ್ದೇಶವಾಗಿದೆ. ಎನ್ ಎಸ್ ಎಪಿಯ ನಾನಾ ಯೋಜನೆಗಳ ಅಡಿಯಲ್ಲಿ ಒಟ್ಟು 3 ಕೋಟಿ ಫಲಾನುಭವಿಗಳಿದ್ದು, ವಾರ್ಷಿಕ 9 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.