ಮೂರನೇ ಮಹಾಯುದ್ಧಕ್ಕೇ ನಾಂದಿ ಹಾಡಲಿದೆಯೇ ಸೊಲೆಮನಿ ಕೊಲೆ..?

ವಾಷಿಂಗ್ಟನ್: ಇರಾನ್‌ನ ಸೇನಾಧಿಕಾರಿ ಖಾಸಿಂ ಸೋಲೆಮನಿ ಅವರನ್ನು ಇರಾಕ್‌ನಲ್ಲಿ ಅಮೆರಿಕದ ಸೇನಾಪಡೆ ಹತ್ಯೆಯನ್ನು ಅಮೆರಿಕದ ವಿರೋಧಪಕ್ಷಗಳು ಸೇರಿದಂತೆ ವಿವಿಧ ದೇಶಗಳಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ಇರಾನ್ ಖಂಡಿಸಿದ್ದು ಈ ಕೃತ್ಯಕ್ಕೆ ತಕ್ಕ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು  ಎಚ್ಚರಿಕೆ ರವಾನಿಸಿದೆ.

ಘಟನೆಯು ವಿಶ್ವದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ  ' ಮೂರನೆಯ ಮಹಾಯುದ್ದ ' ಎಂಬ ಹ್ಯಾಶ್ ಟ್ಯಾಗ್ ಕೂಡ ಟ್ರೆಂಡ್ ನಲ್ಲಿದೆ.

ಐಸಿಸ್ ವಿರುದ್ಧದ ಹೋರಾಟದಲ್ಲಿ  ಮುಂಚೂಣಿಯಲ್ಲಿದ್ದ ಸೋಲೆಮನಿ ಕೊಲೆಯು ಉಗ್ರರ ನಿಂಯತ್ರಣ ಪ್ರಯತ್ನಕ್ಕೆ ಉಂಟಾದ ಭಾರಿ ಹಿನ್ನೆಡೆ ಎನ್ನಲಾಗಿದೆ. ಆದರೆ ಇದನ್ನು ಸಮರ್ಥಿಸಿಕೊಂಡಿರುವ ಟ್ರಂಪ್ , ಸೋಲೆಮನಿ ದೆಹಲಿ ಮತ್ತು ಲಂಡನ್ ಮೇಲೆ ಕೂಡ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂದು ಹೇಳಿದ್ದಾರೆ.

ಪರ ವಿರೋಧ ಚರ್ಚೆಗಳ ನಡುವೆ ಮೂರನೆಯ ಮಹಾಯುದ್ಧದ ಭಯ ಮೂಡಿದ್ದು ಈಗಾಗಲೆ ಅಮೆರಿಕವು ಮದ್ಯಪ್ರಾಚ್ಯಕ್ಕೆ ಬೃಹತ್ ಸೇನೆಯನ್ನು ರವಾನಿಸಿರುವ ಮಾಹಿತಿ ತಿಳಿದು ಬಂದಿದೆ.