ಶ್ರೀಲಂಕಾ ತಂಡಕ್ಕೆ ಎಚ್ಚರಿಕೆ ನೀಡಿದ ಬುಮ್ರಾ..
ಗುವಾಹಟಿ: ಪ್ರವಾಸಿ ಶ್ರೀಲಂಕಾ ವಿರುದ್ದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭಾರತ ಭಾಗವಹಿಸುತ್ತಿದೆ. ಇದರ ನಡುವೆ ಎಲ್ಲರ ಗಮನ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಮೇಲೆ ನೆಟ್ಟಿದೆ. ಬೆನ್ನಿನ ಗಾಯದ ಸಮಸ್ಯೆಗೊಳಗಾಗಿ ನಾಲ್ಕು ತಿಂಗಳುಗಳಷ್ಟು ಕಾಲ ಕ್ರಿಕೆಟ್ ನಿಂದ ದೂರವುಳಿದಿರುವ ಜಸ್ಪ್ರೀತ್ ಬುಮ್ರಾ ಪುನರಾಗಮನದ ಹೊಸ್ತಿಲಲ್ಲಿದ್ದಾರೆ.
ಜಸ್ಪ್ರೀತ್ ಬುಮ್ರಾ ಬೌಲಿಂಗ್ ಅಭ್ಯಾಸವನ್ನು ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ನಿಖರ ಯಾರ್ಕರ್ ದಾಳಿಯ ಮೂಲಕ ಗಮನ ಸೆಳೆದ ಬುಮ್ರಾ, ತಮ್ಮಲ್ಲಿ ಇನ್ನೂ ಸಾಮರ್ಥ್ಯ ಬಾಕಿ ಉಳಿದಿದೆ ಎಂಬುದನ್ನು ಸಾಬೀತು ಮಾಡಿದರು. ಅಲ್ಲದೆ ಎದುರಾಳಿ ಲಂಕಾ ತಂಡಕ್ಕೆ ಸ್ಪಷ್ಟ ಎಚ್ಚರಿಕೆಯನ್ನು ನೀಡಿದರು.
ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯವು ಭಾನುವಾರ ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿದೆ. ಈ ಮಧ್ಯೆ ಟೀಮ್ ಇಂಡಿಯಾ ಆಟಗಾರರು ಮೈದಾನವನ್ನು ತಲುಪಿದ್ದು, ನಿರಂತರ ಅಭ್ಯಾಸದಲ್ಲಿ ಭಾಗಿಯಾಗಿದ್ದಾರೆ.