ನೃತ್ಯಗಾರ್ತಿಯಾಗಿ ದಾಖಲೆ ಮಾಡಿದ ಕೋಪ್ಪಳದ ಬಾಲಕಿ ...

ಕೊಪ್ಪಳ ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಎರಡು ದಿನಗಳ ಕಾಲ  ಗವಿಮಠ ಆವರಣದಲ್ಲಿ ಕೊಪ್ಪಳ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಇವರು ಆಶ್ರಯದಲ್ಲಿ  "ರಾಜ್ಯ ಮಟ್ಟದ ಮಹಿಳೆಯರ ಆಹ್ವಾನಿತ ಪಂದ್ಯಗಳು" ನಡೆದವು. ಯಲಬುರ್ಗಾ ತಾಲ್ಲೂಕಿನ ಇಟಗಿ ಮಠದ ಶ್ರೀ ಶಾಂತವೀರ ಮಹಾಸ್ವಾಮಿಗಳು ಹಾಗೂ ಮನಕೊಡದ ಶ್ರೀಗಳು ಸಾನಿಧ್ಯವಹಿಸಿದ್ದರು. ಉದ್ಘಾಟನಾ ಸಮಾರಂಭವನ್ನು "ಅವನಿ" ಉದ್ಘಾಟಿಸಿ ಮಾತನಾಡಿ ನಾನು ಕಿರಿಯ ನೃತ್ಯಗಾರ್ತಿಯಾಗಿ ಗಿನ್ನಿಸ್ ದಾಖಲೆ ಬರೆದ ಕನ್ನಡದ ಕುವರಿ. ಮೂಲತಃ ಕೊಪ್ಪಳ ಜಿಲ್ಲಾ ಕುಷ್ಟಗಿ ತಾಲೂಕಿನ ಹನುಮಸಾಗರ 'ಅವನಿ'ಗೆ ಹತ್ತರ ಹರೆಯ. ಸದ್ಯ ಬಳ್ಳಾರಿ ಕೆಂದ್ರಿಯ 4ನೇ ತರಗತಿ ಓದುತ್ತಿದ್ದು, ಸತ್ಯನಾರಾಯಣ ಶಾಲೆ ಶಿಕ್ಷಕಿ ಶಾರಾದ ಆಚಾರ್ಯ ಮಾರ್ಗದರ್ಶನ ಭರತನಾತ್ಯ   ಕಲಿತಿದ್ದು, ಮಂಗಳೂರು,ಉಡುಪಿ, ಭಾರತದಲ್ಲಿ ತುಂಬಾ ಹೆಚ್ಚು ಪ್ರಚಲಿತವಿರುವ ಕೂಚುಪುಡಿ ನೃತ್ಯದ ಸೊಗಸನ್ನು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಪಸರಿಸಿದ್ಧು ಅವನಿಯ ಹೆಗ್ಗಳಿಕೆ.2ನೇ ಭಾರಿ "ಸಂಗಿತ ಧ್ಯಾನಸೀರಿ ಪ್ರಶಸ್ತಿ" ಹಾಗೂ ಸಾವಿರಾರು ಸ್ಪರ್ಧಿಗಳನ್ನು ಹಿಂದಕ್ಕುವ ಮೂಲಕ ಅತ್ಯಂತ ಕಿರಿಯ ನೃತ್ಯಗಾರ್ತಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದ್ದಾಳೆ. ಹಾಗೂ ನನ್ನ ತಾಯಿಯೇ ಸ್ಫೂರ್ತಿ  ಹಾಗೂ ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಹೆಗ್ಗಳಿಕೆ ಪಾತ್ರವಾಗಬೇಕು.ಎರಡು  ದಿನಗಳ ನಡೆದ "ರಾಜ್ಯ ಮಟ್ಟದ ಮಹೀಳಾ ಆಹ್ವಾನಿತ ಪಂದ್ಯ"ಗಳಲ್ಲಿ ಪ್ರಥಮಸ್ಥಾನ ಮೈಸೂರು ಸ್ಪೋರ್ಟ್ಸ್ ಹಾಸ್ಟೆಲ್, ದ್ವಿತೀಯಸ್ಥಾನ ಮುಡಬಿದುರೆ ಆಳ್ವಾಸ್, ತೃತೀಯಸ್ಥಾನ ಬೆಂಗಳೂರು ಸಿಟಿ,ಕೊನೆಯ ನಾಲ್ಕನೇ ಸ್ಥಾನ ಧಾರವಾಡದ ಬ್ಯಾಹಟ್ಟಿ ಪಡೆದುಕೊಂಡಿತು.ಹಾಗೂ ಉದ್ವಯೀಮುಖ ತಂಡ ಕೊಪ್ಪಳದ ಡಿವಾಯ್ಇಎಸ್ ಪಡೆದುಕೊಂಡಿತು.ಬಹುಮಾನವು ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಆಗಿರುವ ಕ್ರಿಡಾಪಟುಗಳಿಗೆ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಪಪಂ ಸದಸ್ಯ ಭಾಗ್ಯನಗರ ರಮೇಶ ಯಾಟಿ,ವಾಲಿಬಾಲ್ ಹಿರಿಯ ಆಟಗಾರ ಮುನಾಫ್ ಪಟೇಲ್,ಭರತಕುಮಾರ ಮಹಿಂದ್ರ ಕಿಂದ್ರೆ,ರಾಜೀವ್ ಬ್ಯಾಡಗಿ,ಮಲ್ಲಿಕಾರ್ಜುನ ಮುಂತಾದವರು ಭಾಗವಹಿಸಿದ್ದರು.

ವರದಿ : ಶರಣಪ್ಪ ಕುಂಬಾರ ತಾವರಗೇರಾ