ಭಾರತೀಯರೇ ಸರ್ಕಾರದ ಆದೇಶ ಪಾಲಿಸಿ, ಕೊರೋನಾ ತೊಲಗಿಸಿ : ಸಲಹೆ ನೀಡಿ ಜರ್ಮನಿಯಿಂದ ವಿಡಿಯೋ ಕಳುಹಿಸಿದ ಕನ್ನಡತಿ..!

ಜರ್ಮನಿಯ ಸ್ಟುಟ್‌ಗಾರ್ಟ್ ಸಿಟಿಯಲ್ಲಿ ವಾಸಿಸುತ್ತಿರುವ ಪುಷ್ಪಾ ಎಂಬ ಕನ್ನಡತಿ, ಭಾರತೀಯರಿಗೆ ಕರೋನಾ ವಿರುದ್ಧ ಹೋರಾಡಲು ವಿಡಿಯೊ ಮೂಲಕ ಸಲಹೆ ನೀಡಿದ್ದಾರೆ. ಜನರು ಭಾರತ ಸರ್ಕಾರದ ಆದೇಶವನ್ನು ಪಾಲಿಸದೆ ಹೋದರೆ, ಜನರು ತಮ್ಮ ನಡುವೆ ಅಂತರ ಕಾಯ್ದುಕೊಳ್ಳದೇ ಹೋದರೆ ಕೋರನ ವೇಗವಾಗಿ ಹರಡಿ ಬಿಡುತ್ತದೆ ಎಂದು ತಿಳಿ ಹೇಳಿದ್ದಾರೆ.

ಇನ್ನು ಕೊರೋನಾದಿಂದಾಗಿ ಜರ್ಮನಿ ಅನುಭವಿಸುತ್ತಿರುವ ದುರಂತದ ಸ್ಥಿತಿಯ ಬಗ್ಗೆ ಸಹ ವಿವರಿಸಿದ್ದಾರೆ. ಜರ್ಮನಿಯ ಜನತೆ ಮೊದಲೆರಡು ವಾರ ಸರ್ಕಾರದ ಆದೇಶವನ್ನು ಸರಿಯಾಗಿ ಪಾಲಿಸದೇ ಇದ್ದ ಕಾರಣ, ಇದೀಗ ದಿನಕ್ಕೆ ಸಾವಿರಾರು ಕೊರೋನಾ ಸೋಂಕಿತ ಪ್ರಕರಣಗಳು ಹೊರಬರುತ್ತಿವೆ ಎಂದು ಪುಷ್ಪಾ ತಿಳಿಸಿದ್ದಾರೆ. 

ಭಾರತ ಸರ್ಕಾರ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಅತಿ ಬೇಗ ಒಳ್ಳೆಯ ಕ್ರಮ ತೆಗೆದುಕೊಂಡಿದೆ. ಆದ್ದರಿಂದ ಜನರು ಭಾರತ ಸರ್ಕಾರದ ಲಾಕ್ ಡೌನ್ ಆದೇಶವನ್ನು ಸರಿಯಾಗಿ ಪಾಲಿಸಿ ಸುರಕ್ಷಿತವಾಗಿರಿ ಎಂದು ಪುಷ್ಪಾ ವಿಡಿಯೊದಲ್ಲಿ ಹೇಳಿದ್ದಾರೆ.