ಕರೋನಾ ಮಹಾಮಾರಿ ವಿರುದ್ಧ ಹೋರಾಡಲು 15 ಸಾವಿರ ಕೋಟಿ ಮೀಸಲಿಟ್ಟ ಮೋದಿ ಸರ್ಕಾರ ..!
ದೇಶದಲ್ಲಿ ಕರೋನಾ ವೈರಸ್, ಕೆಲವು ದಿನಗಳಿಂದ ವ್ಯಾಪಕವಾಗಿ ಹರಡುತ್ತಿದ್ದು, ಈ ರೋಗದ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ 15000 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಕೊರೋನಾದಿಂದಾಗಿ ಭಾರತಕ್ಕೆ ಬಂದಿರುವ ಬಿಕ್ಕಟ್ಟನ್ನು ಕುರಿತು, ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 21 ದಿನಗಳ ಕಾಲ ಇಡೀ ಭಾರತ ಲಾಕ್ ಡೌನ್ ಮಾಡುವ ಆದೇಶವನ್ನು ಹೊರಡಿಸಿದರು. ಕರೋನಾ ರೋಗವನ್ನು ತಡೆಗಟ್ಟಲು, ಕೇಂದ್ರ ಸರ್ಕಾರವು, ಆರೋಗ್ಯ ಮತ್ತು ವೈದ್ಯಕೀಯ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲು ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆ, ಬೃಹತ್ ವೈದ್ಯಕೀಯ ಕಂಪೆನಿಗಳು, ಹಾಗೂ ಆರೋಗ್ಯ ತಜ್ಞರು ಕೋರನ ವಿರುದ್ಧದ ಹೋರಾಟಕ್ಕೆ ಭಾರತದ ಜೊತೆ ಕೈಜೋಡಿಸಿದ್ದಾರೆ. ವೈದ್ಯಕೀಯ ಸೌಕರ್ಯಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ 15 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ತಿಳಿಸಿದರು.
ದೇಶವೇ ಲಾಕ್ ಡೌನ್ ಆದರೂ ಜೀವನಾವಶ್ಯಕ ವಸ್ತುಗಳಾದ ಹಾಲು, ತರಕಾರಿ, ರೇಷನ್, ಆಸ್ಪತ್ರೆ, ಮೆಡಿಕಲ್ ಶಾಪ್ ಗಳು ಜನರಿಗೆ ಲಭ್ಯವಿರುವಂತೆ ಸರ್ಕಾರ ಯೋಜನೆಗಳನ್ನು ನಡೆಸಿದೆ ಎಂದು ಸಹ ಪ್ರಧಾನಿ ತಿಳಿಸಿದರು.