ಜಪಾನಿನಲ್ಲಿ ʼಟ್ವಿಟರ್ ಕಿಲ್ಲರ್ʼ ಎಂದೇ ಪ್ರಸಿದ್ದಿಯಾಗಿರುವ “ಟಕಹಿರೊ ಶಿರೈಸಿ” .

ಈ ವ್ಯಕ್ತಿಯ ಕತೆ ಕೇಳಿದರೆ ಎಂಥ ಮನುಷ್ಯರಿಗೂ ಮೈಜುಮ್ಮೆನಿಸುತ್ತದೆ .  ಜಪಾನಿನ ಟೊಕಿಯೋದಲ್ಲಿ ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ಬರೋಬ್ಬರಿ 9 ಕೊಲೆಗಳನ್ನು ಮಾಡಿ  ಅವರ ದೇಹದ ಅಂಗಾಂಗಗಳನ್ನು ಬೇರ್ಪಡಿಸಿ ಅವುಗಳನ್ನು  ರೆಫ್ರಿಜರೇಟರ್‌ ನಲ್ಲಿ ಇಟ್ಟಿದ್ದು ತನಿಕೆಯಲ್ಲಿ ಬಹಿರಂಗವಾಗಿದೆ.

ಕೇವಲ 30 ವರ್ಷ ವಯಸ್ಸಿನ ಟಕಹಿರೊ ಕೈಯಿಂದ ಕೊಲೆಯಾದ ಮಂದಿ ನೆಟ್ಟಿಗರು. ಯಾರು ಸಾಮಾಜಿಕ ಜಾಲತಾಣಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಪೋಸ್ಟ್ಗಳನ್ನು ಹಾಕುತ್ತಿದ್ದರೋ  ಅಂತವರನ್ನು ಈತ ಟ್ವಿಟರ್‌ನಲ್ಲಿ ಸಂಪರ್ಕಿಸುತ್ತಿದ್ದ . ಟಕಹಿರೊ ಟ್ವಿಟರ್‌ನಲ್ಲಿ “ಹ್ಯಾಂಗ್‌ ಮ್ಯಾನ್”  ಎಂಬ ಹೆಸರಿನಲ್ಲಿ ಅಕೌಂಟ್‌ ತೆರೆದಿದ್ದು  ಅವರಿಗೆ ನಿಮ್ಮ ಆಸೆ ಈಡೇರಿಸುತ್ತೇನೆ ನನ್ನ ಅಪಾ ರ್ಟ್ಮಮೆಂಟ್ಗೆ ಬನ್ನಿ ಎಂದು ಹೇಳುತಿದ್ದ. ನಂತರ ಅವರನ್ನು ಕೊಲ್ಲುತ್ತಿದ್ದ. ಅಷ್ಟೇ ಅಲ್ಲದೇ ಈತ ಒಬ್ಬ ಮಹಿಳೆ  ಹಾಗೂ ಯುವತಿಯ ಮೇಲೆ ಅತ್ಯಾಚಾರವನ್ನು ಮಾಡಿ ಅವರನ್ನು ಕೊಲೆ ಮಾಡಿದ್ದಾನೆ. ಇದನ್ನು ನೋಡಿದ ಮಹಿಳೆಯ ಪ್ರೀಯಕರನ್ನು ಕೂಡಾ ಕೊಲೆ ಮಾಡಿದ್ದಾನೆ.

ಸತ್ತ ಓರ್ವ ಮಹಿಳೆ ಯ ಅಣ್ಣ ಪೊಲೀಸರಿಗೆ ಹ್ಯಾಂಗ್‌ ಮ್ಯಾನ ಎಂಬ ಅಕೌಂಟ್‌ ನಿಂದ  ಅವಳಿಗೆ ಬಂದ ಕೊನೆಯ ಮೇಸೆಜ್‌ ಅನ್ನು ತೋರಿಸಿದದ್ದಾನೆ. ಆಗ ಪ್ರಕರಣವನ್ನು ಬೆನ್ನೆತ್ತಿ ಹೋದ ಪೊಲೀಸರು ಈತನ ವಿಕೃತ ಮನಸ್ಥಿಯನ್ನು ಬೆಳಕಿಗೆ ತಂದಿದ್ದಾರೆ.  

2017 ರಲ್ಲಿ ಪೊಲೀಸರು  ಟಕಹಿರೋನನ್ನು  ಬಂಧಿಸಿದಾಗ  ರೆಫ್ರಿಜರೇಟರ್‌ನಲ್ಲಿ ಎಂಟು ಹುಡುಗಿಯರ ಹಾಗೂ ಒಂದು ಹುಡಗನ ಮೃತದೇಹ ಪತ್ತೆಯಾಗಿವೆ. ಸಿಕ್ಕ  ಎಲ್ಲಾ ಮೃತದೇಹಗಳು  15 ರಿಂದ  26 ವಯಸ್ಸಿನವರದ್ದು ಎಂದು ತಿಳಿದು ಬಂದಿದೆ. ಪೊಲೀಸರಿಗೆ  ಬೇರ್ಪಡಿಸಿದ ಅಂಗಾಂಗಗಳು  ಸಿಕ್ಕಿದ್ದು ಈ ವ್ಯಕ್ತಿ ಎಲ್ಲ ಕೊಲೆ ಕೃತ್ಯಗಳನ್ನು ತಾನೇ ಮಾಡಿರುವುದಾಗಿ ನ್ಯಾಯಾಲಯದ ಮುಂದೆ ತಪ್ಪೋಪ್ಪಿಕೊಂಡಿದ್ದಾನೆ.

ತನಿಖೆಯ  ಅಧಾರದ ಮೇಲೆ  ಟೋಕಿಯೊ ನ್ಯಾಯಾಲಯವು ಟಕಹಿರೋ ಶಿರೈಸಿ ಗೆ ಮರಣದಂಡನೆ ನೀಡಿದೆ . ಈತ ಮರಣದಂಡನೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರಲು ನಿರ್ಧರಿಸಿದ್ದಾನೆ. ಇನ್ನು ಟಕಹಿರೊನಾ ವಕೀಲ ನನ್ನ ಕಕ್ಷಿದಾರ  ಸತ್ತ ಜನರಿಗೆ ಸಹಾಯ ಮಾಡಿದ್ದಾನೆ . ಅವನು ಯಾವ  ಅಪರಾಧ ಮಾಡಿಲ್ಲ ಎಂದು  ವಾದ ಮಂಡಿಸಿದ್ದರು. 

ವರದಿ:ಮೊನೀಕ