ವಿಧಾನ ಪರಿಷತ್ ರದ್ದತಿಗೆ ಮುಂದಾದ ಜಗನ್ ಸರ್ಕಾರ....
ಆಂಧ್ರ ಪ್ರದೇಶ : ಆಂಧ್ರ ಪ್ರದೇಶ ವಿಧಾನ ಪರಿಷತ್ ವ್ಯವಸ್ಥೆಯನ್ನು ರದ್ದುಗೊಳಿಸುವ ಕುರಿತು ಜಗನ್ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡಿದೆ.
ರಾಜ್ಯದ ಹಿತದ್ರಷ್ಟಿಯಿಂದ ರಚಿಸಲಾಗಿದೆ ಹಾಗೂ ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಂಡ ವೀಧೆಯಕಗಳಿಗೆ ವಿಧಾನ ಪರಿಷತ್ ನಲ್ಲಿ ತಡೆ ನೀಡಲಾಗುತ್ತಿದೆ. ಆದ್ದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಜಗನ್ ಸರ್ಕಾರ ತಿಳಿಸಿದೆ.
ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಜಗನ್ ಪಕ್ಷಕ್ಕೆ ವಿಧಾನ ಪರಿಷತ್ ನಲ್ಲಿ ಮಾತ್ರ ಬಹುಮತವಿಲ್ಲ. 58 ಸದಸ್ಯ ಬಲದ ವಿಧಾನ ಪರಿಷತ್ ನಲ್ಲಿ ವೈಎಸ್ ಆರ್ ಪಕ್ಷದ ಸದಸ್ಯರ
ಸಂಖ್ಯೆ 9 ಮಾತ್ರ. ಇನ್ನು ಪ್ರತಿಪಕ್ಷ ಟಿಡಿಪಿ ವಿಧಾನ ಪರಿಷತ್ ನಲ್ಲಿ 28 ಸದಸ್ಯರನ್ನು ಹೊಂದಿದೆ. ಆ ಮೂಲಕ ಜಗನ್ ಸರ್ಕಾರದ ಮಹತ್ತರ ನಿರ್ಣಯಗಳಿಗೆ ಟಿಡಿಪಿ ಮೇಲ್ಮನೆಯಲ್ಲಿ ತಡೆಯೋಡ್ದುತಿತ್ತು. ಆದ್ದರಿಂದ ಜಗನ್ ಸರ್ಕಾರ ವಿಧಾನ ಪರಿಷತ್ ನ್ನು ವಿಸರ್ಜಿಸಲು ಮುಂದಾಗಿದೆ.
ಯಾವೆಲ್ಲಾ ರಾಜ್ಯಗಳಲ್ಲಿ ಪರಿಷತ್ ವ್ಯವಸ್ಥೆ ಇದೆ..?
ಕರ್ನಾಟಕ, ಆಂಧ್ರಪ್ರದೇಶ , ತೆಲಂಗಾಣ , ಉತ್ತರಪ್ರದೇಶ, ಮಹಾರಾಷ್ಟ್ರ ಹಾಗೂ ಬಿಹಾರ ಸೇರಿದಂತೆ ಒಟ್ಟು ದೇಶದ 6 ರಾಜ್ಯಗಳಲ್ಲಿ ದ್ವಿ ಸದನ ವ್ಯವಸ್ಥೆ ಇದೆ. ಇನ್ನು ಕೇಂದ್ರಾಡಳಿತ ಪ್ರದೇಶವಾಗಿ ವಿಭಜನೆ ಹೊಂದುವ ಮೊದಲು ಜಮ್ಮು - ಕಾಶ್ಮೀರ ರಾಜ್ಯದಲ್ಲೂ ವಿಧಾನ ಪರಿಷತ್ ವ್ಯವಸ್ಥೆ ಇತ್ತು. ಆದರೆ
ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಬಳಿಕ ಅಲ್ಲಿನ ವಿಧಾನ ಪರಿಷತ್ ನ್ನು ರದ್ದು ಪಡಿಸಲಾಯಿತು.