ಮಧ್ಯ ಪ್ರಿಯರಿಗೆ ಶಾಕ್ ನೀಡಿದ ಬಿಎಸ್ ಯಡಿಯೂರಪ್ಪ
ಬೆಂಗಳೂರು: 7 ನೇ ಬಾರಿಗೆ ರಾಜ್ಯ ಬಜೆಟ್ ಮಂಡಿಸಿರಿವ ಸಿಎಂ ಬಿ ಎಸ್ ಯಡಿಯೂರಪ್ಪ ರಾಜ್ಯದ ಅಬಕಾರಿ ತೆರಿಗೆ ಸಂಗ್ರಹದ ಗುರಿಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ. ಅಬಕಾರಿ ಇಲಾಖೆಗೆ 22,700 ಕೋಟಿ ರೂಪಾಯಿ ತೆರಿಗೆ ಸಂಗ್ರಹಣೆಯ ಗುರಿ ನೀಡಲಾಗಿದೆ. ಇದರಿಂದ ರಾಜ್ಯದಲ್ಲಿ ಮದ್ಯದ ದರಯಲ್ಲಿ ಶೇ.6ರಷ್ಟು ಏರಿಕೆಯಾಗಲಿದೆ.
ಅಬಕಾರಿ ಸುಂಕ ಏರಿಸಲಾಗಿದ್ದು, ಏಪ್ರಿಲ್ 1 ರಿಂದಲೇ ಜಾರಿಗೆ ಬರಲಿದೆ.ಬಿಎಸ್‌ವೈ ಸರಕಾರ ಅಬಕಾರಿ ಸುಂಕದಲ್ಲಿ ಶೇ.10 ಹೆಚ್ಚಳ ಮಾಡಲಿದೆ ಎಂಬ ಮಾತುಕಗಳು ಕೇಳಿಬಂದಿದ್ದವು. ಆದರೆ, ತೆರಿಗೆ ಸಂಗ್ರಹದ ಟಾರ್ಗೆಟ್ ಹೆಚ್ಚಿಸಲಾಗಿದೆ. ಒಟ್ಟಾರೆ, ಮದ್ಯದ ಬೆಲೆಯಲ್ಲಿ ಈಗಿರುವ ಬೆಲೆಗಿಂತ ಶೇ. 6ರಷ್ಟು ಹೆಚ್ಚಾಗಲಿದೆ.