ಇಂದು ವಿಶ್ವ ಪರಿಸರ ದಿನ : ಈ ಬಾರಿಯ ಘೋಷವಾಕ್ಯ ಏನು ಗೊತ್ತಾ...?
ಪ್ರತಿ ವರ್ಷ ಜೂನ್ 5 ರಂದು ಪರಿಸರದ ಕುರಿತು ಜನರಲ್ಲಿ ಜಾಗ್ರತಿ ಮೂಡಿಸಲು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.ಅದರಂತೆ ಇಂದು ಸಹ
ಎಲ್ಲೆಡೆ ಸಸಿ ನೆಡುವ ಮೂಲಕ ಎಲ್ಲರೂ ಪರಿಸರ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ.
ಪ್ರತಿ ವರ್ಷ ವಿಶ್ವಸಂಸ್ಥೆ ನಿರ್ಧರಿಸುವ ಒಂದೊಂದು ಥೀಮ್ ನೊಂದಿಗೆ ಪರಿಸರ ದಿನವನ್ನು ಜಗತ್ತಿನೆಲ್ಲೆಡೆ ಆಚರಿಸಲಾಗುತ್ತದೆ. ಅದೇ ರೀತಿ ಈ ಬಾರಿಯ ಪರಿಸರ ದಿನಾಚರಣೆಗೆ ವಿಶ್ವಸಂಸ್ಥೆ ಥೀಮ್ ಒಂದೊನ್ನು ನೀಡಿದೆ. ಅದುವೇ " ಜೀವವೈವಿಧ್ಯತೆ"
ಪರಿಸರದ ಸಮತೊಲನ ಕಾಪಡಬೇಕಾದರೆ ಜೀವವೈವಿಧ್ಯತೆಯನ್ನು ರಕ್ಷಿಸುವುದು ಅತಿ ಅವಶ್ಯ..ಭೂಮಿಯಲ್ಲಿ ಮನುಷ್ಯ ಸೇರಿದಂತೆ ಹಲವು ಬಗೆಯ ಸಸ್ಯಗಳು ವಿವಿಧ ಜಾತಿಯ ಪ್ರಾಣಿಗಳು ಅಸ್ತಿತ್ವದಲ್ಲಿವೆ. ಆದರೆ ಇತ್ತೀಚಿಗೆ ಅರಣ್ಯ ನಾಶ , ಕಾಡುಪ್ರಾಣಿಗಳ ಬೇಟೆ ಹೀಗೆ ಹಲವು ಕಾರಣಗಳಿಗೆ
ಅಪರೂಪದ ಸಸ್ಯ ಹಾಗೂ ಪ್ರಾಣಿ ಸಂಕುಲ ವಿನಾಶದ ಅಂಚಿಗೆ ತಲುಪಿವೆ.ಆದ್ದರಿಂದ ಈ ಬಾರಿಯ ಥೀಮ್ ಆಗಿ " ಜೀವವೈವಿಧ್ಯತೆ " ಯನ್ನು ಆಯ್ಕೆಮಾಡಿಕೊಳ್ಳಲಾಗಿದೆ.
ವಿಶ್ವ ಪರಿಸರ ದಿನವನ್ನು ಮೊದಲು ಆಚರಿಸಿದ್ದು 1974 ರಲ್ಲಿ. ಸ್ಟಾಕ್ ಹೋಮ್ ನಲ್ಲಿ 1972 ನಡೆದಿದ್ದ ವಿಶ್ವಸಂಸ್ಥೆ ಅಧಿವೇಶನದಲ್ಲಿ ಪರಿಸರ ದಿನ ಆಚರಿಸುವ ನಿರ್ಣಯ ಕೈಗೊಳ್ಳಲಾಯಿತು. ಎರಡು ವರ್ಷಗಳ ನಂತರ 1974 ರಲ್ಲಿ " ಇರುವುದೊಂದೇ ಭೂಮಿ " ಎನ್ನುವ ಥೀಮ್ ನೊಂದಿಗೆ ಮೊದಲ ಬಾರಿ ಪರಿಸರ ದಿನವನ್ನು ಆಚರಿಸಲಾಯಿತು.