ಮಾನವನೇ ನೀನೇಕೆ ಇಷ್ಟು ಕ್ರೂರಿ??

 

ಮಾನವನೇ ನೀನೇಕೆ ಇಷ್ಟು ಕ್ರೂರಿ??

ಕೇರಳದ ಮನಪುರಂ ಜಿಲ್ಲೆಯ ಭಾಗದಲ್ಲಿ. "ಪೈನಾಪಲ್ ನಲ್ಲಿ  ವಿದ್ವಂಸಕ ಸೃಷ್ಟಿಸುವ ಸ್ಫೋಟಕ ಪದಾರ್ಥಗಳನ್ನು"ತುಂಬಿಸಿ. ಹಸಿವಿನಿಂದ ರಸ್ತೆಯ ತುಂಬೆಲ್ಲ  ಓಡಾಡಿದ "ಬಸರಿ ಆನೆಗೆ " ತಿನ್ನಲು ಕೊಟ್ಟು .ಮಾನವೀಯ ಗುಣವನ್ನು ಮರೆತ ಮನುಷ್ಯ  ನನ್ನು ನಂಬಿ ಹಸಿದ ಹೊಟ್ಟೆಗೆ ಹುಲ್ಲುಕಡ್ಡಿ ಬೇಕಾದರೂ ಸಾಕಾಗಬಹುದು ಎಂಬ ಪ್ರತೀತಿ ಇದೆಯಲ್ಲವೇ!! ಅದೇ ರೀತಿ ಈ ಹೆಣ್ಣು ಆನೆ ಹಸಿವಿನಿಂದ ಮನುಷ್ಯನನ್ನೇ ನಂಬಿ ತಿಂತಿದ್ದ ಪರಿಣಾಮವಾಗಿ
 ತನ್ನ ಜೊತೆಗೆ ತನ್ನ ಹೊಟ್ಟೆಯಲ್ಲಿರುವ ಕಂದಮ್ಮನನ್ನು ಸಹ  ವಿವಶ ವಿಧಿ ತನ್ನ ಕ್ರೂರನರ್ತನ ತೋರಿಸಿಬಿಟ್ಟ.

ಈ ಘಟನೆ ಹಾಗೂ ಇದರ ಪರಿಣಾಮ ಎಷ್ಟಿತ್ತೆಂಬುದರ ಅರಿವು ನಮಗೆ ಕ್ರಮೇಣವಾಗಿ ಕಾಣಸಿಗುತ್ತದೆ. ಪೈನಾಪಲ್ ತಿಂದು ಆನೆಯ ಬಾಯಿ ಗಂಟಲು ಹೊಟ್ಟೆ ಸ್ಪೋಟದ  ತೀವ್ರತೆ ನಮಗೆ ಅರಿವಾಗುತ್ತದೆ. ಆನೆ ಪ್ರಾಣವೇ ಹೋಗುವಂತಹ ನೋವಿನ ಪರಿಸ್ಥಿತಿಯಲ್ಲಿ ಹಳ್ಳಿಯ ತುಂಬೆಲ್ಲ ರಸ್ತೆ ರಸ್ತೆಯನ್ನು, ಬಿಡದೆ ಓಡಾಡಿ ಚಿರಾಡಿ ತನ್ನ ನೋವನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ. ಕಡೆಗೆ ಕೆರೆಯ ನೀರನ್ನು ಕುಡಿಯಲು ಬಂದು ನೋವನ್ನು ತಡೆಯಲಾರದೆ ಕೆರೆಯ ಮಧ್ಯಭಾಗ ಹೋಗಿ ನಿಂತು ತನ್ನ ಪ್ರಾಣವನ್ನು ಬಿಟ್ಟಿದೆ.

ಈ ಘಟನೆ ಎಷ್ಟು ವಿಚಿತ್ರವಾಗಿದೆ ಎಂದರೆ 'ಆನೆ ನಡೆದಿದ್ದೇ ಹಾದಿ'ಎಂದು ನಾವು ಹಲವಾರು ಕಡೆ ಓದಿದ್ದೇವೆ ನೋಡಿದ್ದೇವೆ ಕೋಪಕ್ಕೆ ಗುರಿಯಾಗಿ ಹಲವಾರು ತರಹ ಪರಿಣಾಮಗಳು ಎದುರಾಗಿದೆ.
ಆದರೆ ಈ ಘಟನೆಯಲ್ಲಿ ಬಹಳ ವಿಭಿನ್ನ ತನಗೆ ಮೋಸ ಮಾಡಿ ಪ್ರಾಣವನ್ನು ಕಳೆದುಕೊಳ್ಳುವಂತಹ ನೋವನ್ನು ನೀಡಿದ ಮನುಷ್ಯನಿಗೆ ಕಿಂಚಿತ್ತು ತೊಂದರೆ ಮಾಡದೆ ಯಾರಿಗೂ ಸ್ವಲ್ಪ ತೊಂದರೆ ನೀಡದೆ ನದಿಯ ಮಧ್ಯದಲ್ಲಿ ತನ್ನೊಂದಿಗೆ ಮರಿಯನ್ನು ಸಹ ಸ್ಪೋಟದ ತೀವ್ರತೆಗೆ ಪ್ರಾಣ ಕೈಚೆಲ್ಲಿದೆ.

ಕೋರೋನಾ ಮಹಾಮಾರಿ ವಿಶ್ವದಲ್ಲೆಡೆ ಹಬ್ಬಿ ತನ್ನ ರೌದ್ರಾವತಾರ ತೋರಿ ಲಕ್ಷಾಂತರ ಪ್ರಾಣ ಭಕ್ಷಿಸಿದೆ. ಮನುಕುಲಕ್ಕೆ ಈ ರೋಗ ಕೊಟ್ಟ ಪೆಟ್ಟು  ಅಗಾದ ಆ ಪೆಟ್ಟು  ಸುಧಾರಣೆ ಮಾಡಿಕೊಳ್ಳಲು ಇನ್ನು ಹಲವಾರು ಸಂವತ್ಸರಗಳು ಬೇಕೆನಿಸುತ್ತದೆ.
ಮನುಷ್ಯ ಮನುಷ್ಯನಿಗೆ ಸಹಾಯ ಮಾಡಿ ಒಬ್ಬರಿಗೊಬ್ಬರು ನೆರವಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾನವ  ಎಷ್ಟು ಕ್ರೂರ ಕೃತ್ಯ ಎಸಗಿದ್ದಾನೆ ಎಂದರೆ ಇಂತಹ ಸಂದರ್ಭದಲ್ಲಿ.!! ಕೇಳಲು ಅಥವಾ ಈ ವಿಷಯ ಅರಗಿಸಿಕೊಳ್ಳಲು "ಮನುಷ್ಯತ್ವ ಇರುವವರು ಸ್ವಲ್ಪ ದಿನ ಅರಗಿಸಿಕೊಳ್ಳಲಾಗದೆ ಪೇಚ್ಚ್ ಆಡಬಹುದು."

ಈ ಘಟನೆ ವರದಿಯಾಗುತ್ತಿದ್ದಂತೆ ದೇಶದ ನಾನಾ ಕಡೆಯಿಂದ ಇಂತಹ ಕ್ರೂರ ಮನುಕುಲವನ್ನು ನಾಚಿಸುವಂತಹ ಕೆಲಸ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು ಎಂದು ಹಲವಾರು ಜನ ಮಾತನಾಡುತ್ತಿದ್ದಾರೆ.
ನಮ್ಮ ಭಾರತ ಕಂಡ ಅಪ್ರತಿಮ ಕಲಿಯುಗದ ಕರ್ಣ ರತನ್ ಟಾಟಾ ಅವರು ಸಹ ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಇವರೊಂದಿಗೆ ದೇಶದ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.  ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಸಹ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಈ ಘಟನೆ ಕುರಿತು ಬರೆದುಕೊಂಡಿದ್ದಾರೆ..