ಯೂತ್ ಫ್ರೆಂಡ್ಲಿ ಯುವ ರಾಜ..!

ರಾಜಕುಮಾರ ಎಂದಾಕ್ಷಣ ಮೂಡುವ ಮಾಮೂಲಿ ಚಿತ್ರಕ್ಕೆ ವಿರುದ್ಧವಾಗಿರುವ ಯದುವೀರ್ ಹೊಸ ತಲೆಮಾರನ್ನು ಪ್ರತಿನಿಧಿಸುವ ಹೈಟೆಕ ರಾಜರಾಗಿ ಜನರ ಮೇಲೆ ಪ್ರಭಾವ ಬೀರುತ್ತಾರೆ.ಮೈಸೂರು ಅರಮನೆಯ ಸಾಂಪ್ರದಾಯಿಕ ಆಚರಣೆಯ ವೇಳೆ ರಾಜ ಪೋಷಾಕಿನಲ್ಲಿ ಕಂಗೊಳಿಸಿದರು ಬೇರೆ ಸಮಯದಲ್ಲಿ ಸೂಟು-ಬೂಟು ದಾರಿ ಸ್ಟೈಲಿಶ್ ಅ ಅವರು. ರಾಜ ಎಂದರೆ ರಾಜಮನೆತನದ ಚೌಕಟ್ಟಿನೊಳಗೆ ಘನ ಗಂಭೀರವಾಗಿರಬೇಕು ಎಂಬುದು ಅನಿಸಿಕೆಗೂ ಹೊಸ ಟ್ವಿಸ್ಟ್ ನೀಡಿರುವ
ಯದುವೀರ್ ಜನಸಾಮಾನ್ಯರೊಂದಿಗೆ ಮುಖ್ಯವಾಗಿ ಯುವ ಸಮುದಾಯದೊಂದಿಗೆ ಅದರತ್ತ ಗಮನ ಸೆಳೆದರು. ಅವರು ಶಾಲಾ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ, ಪ್ರಸ್ತಕ ವಿದ್ಯಮಾನಗಳ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳುತ್ತಾರೆ. ಸಂಗೀತ ಮುಂತಾದ ತಮ್ಮ ಹವ್ಯಾಸಗಳನ್ನು ಪ್ರದರ್ಶಿಸುತ್ತಾರೆ.
ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದು ಆಗಸ್ಟ್ ಹೊರಬಂದಿದ್ದ ಎದುರಿಗೆ ರಾಜನಾಗುವ ಜವಾಬ್ದಾರಿ ದೊರೆತಾಗ ಅದನ್ನು ಸಂತೋಷದಿಂದ ಒಪ್ಪಿಕೊಂಡರು. ಈ ಮೂಲಕ ತಾವೆಷ್ಟೇ ಆಧುನಿಕ ರಾಗಿದ್ದರು ಸಾಂಪ್ರದಾಯಿಕ ಆಚರಣೆಯ ವಿಷಯಕ್ಕೆ ಬಂದಾಗ ತಮ್ಮ ಆದ್ಯತೆ ಮನೆ, ಮನೆತನ ಮತ್ತು ಕುಟುಂಬಕ್ಕೆ ಎಂಬುದನ್ನು ತೋರಿಸಿ ಹೊಸ ಪೀಳಿಗೆಯ ಕಣ್ಮಣಿಯಾಗಿದ್ದಾರೆ.