ತಾವರಗೆರಾ ಪಟ್ಟಣದಲ್ಲಿ ಪ್ಲಾಸ್ಟಿಕ್ ವಶ....

ತಾವರಗೇರಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮುಂಗಟ್ಟುಗಳಿಗೆ ತೆರಳಿ ನಿಷೇದಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಯಿತು. ಹಾಗೂ ಪ್ರತಿ ಅಂಗಡಿ ಅಂಗಡಿಗಳಿಗೆ ಹೋಗಿ ನಿಷೇದಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ಅದನ್ನು ತ್ಯಾಜ್ಯ ವಿಲೇವಾರಿ ಮಾಡುವ ವಾಹನದಲ್ಲಿ ಸಂಗ್ರಹಣೆ ಮಾಡಲಾಯಿತು.

ಅಂಗಡಿ ಮಾಲೀಕರಿಗೆ ಉದ್ದಿಮೆ ಪರವಾನಿಗೆ ಕಡ್ಡಾಯವಾಗಿ ನೋಂದಣಿಯನ್ನು ಮಾಡುವುದು. ಸಾರ್ವಜನಿಕ ಸ್ಥಳಗಳಲ್ಲಿ, ಬಸ್ ನಿಲ್ದಾಣ,ಮಾರುಕಟ್ಟೆ, ರಸ್ತೆ ಬದಿಯಲ್ಲಿ,ದೇವಸ್ಥಾನ, ಶಾಲೆ ಕಾಲೇಜು ಆವರಣದಲ್ಲಿ,ಆಸ್ಪತ್ರೆ, ಚರಂಡಿಗಳಲ್ಲಿ ಕಸವನ್ನು ವಿಲೇವಾರಿ ಮಾಡುವ ವಾಹನದಲ್ಲಿ ಹಾಕುವುದು. ಹಾಗೂ ಪಟ್ಟಣ ಪಂಚಾಯಿತಿಯ ಸ್ವಚ್ಛತೆಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶಂಕರ್ ಕಾಳೆ,ಆರೋಗ್ಯ ನಿರೀಕ್ಷಕ ಪ್ರಾಣೇಶ ಬಳ್ಳಾರಿ,ಮರೇಶ ನಾಯ್ಕ, ಖಾಜಾ ಹುಸೇನ್, ಶ್ಯಾಮೂರ್ತಿ ಕಟ್ಟಿಮನಿ, ಶರಣಪ್ಪ ಸೈಯಂದರ್, ಖಾನ್, ಅಬ್ದುಲ್ ಖಾದರ್ ಹಾಗೂ ಪಪಂ ಸಿಬ್ಬಂದಿ ಪಾಲ್ಗೊಂಡಿದ್ದರು. 

ವರದಿ ಶರಣಪ್ಪ ಕುಂಬಾರ ತಾವರಗೇರಾ.