ಬೆಲೆ ಏರಿಕೆಗೆ ಹಿಂದಿನ ಸರಕಾರಗಳೆ ಕಾರಣ -ಪ್ರಧಾನಿ ಮೋದಿ .ರೂ .100 ಗಡಿಯತ್ತ ಪೆಟ್ರೋಲ್

ಜನಸಾಮನ್ಯರ ಆರ್ಥಿಕ ಸ್ಥಿತಿ ಕರೋನ ದಿಂದ ಅದೋಗತಿಗೆ ತಲುಪಿದೆ ಆದರೆ ಸರ್ಕಾರ  ಮಾತ್ರ ಇದನ್ನು ಗಮನಿಸದೆ ಬೆಲೆ ಏರಿಕೆ ಮಾಡ್ತಾ ಇರೋದು ಜನಸಾಮನ್ಯರ ಸ್ಥಿತಿ ಮಾತ್ರ ಕಷ್ಟಕರವಾಗಿದೆ . ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ ಅನ್ನೋ ಸ್ಥಿತಿ ಗೆ ಜನ ತಲುಪಿದ್ದಾರೆ . ಜನರ ಹಿತಾಸಕ್ತಿ ನೋಡಿಕೊಳ್ಳಬೇಕಾದ  ಸರ್ಕಾರವೇ  ಜನರಿಗೆ ಬೆಲೆ ಏರಿಕೆಯ ಬರೆ ದಿನದಿಂದ ದಿನಕ್ಕೆ ಹಾಕುತ್ತಲೆ ಇದೆ . 

ತೈಲ  ಬೆಲೆ ಏರಿಕೆಗೆ ಹಿಂದಿನ ಸರ್ಕಾರದ  ನೀತಿಗಳೆ  ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿಯವರು  ತಿಳಿಸಿದ್ದಾರೆ .  ಆಮದು ಅವಲಂಬನೆಗೆ ಕಡಿವಾಣ ಹಾಕಬೇಕಿತ್ತು ಎಂದು ಪ್ರಧಾನಿ ಸ್ಪಷ್ಟ ಪಡಿಸಿದ್ದಾರೆ . 

 ಅಂಗೈಗೆ ಎಟುಕದ ರೀತಿಯಲ್ಲಿ ಬೆಲೆಗಳು ಗಗನಕ್ಕೆ ಏರಿದರೆ ಬದುಕು ಮಾತ್ರ ಅಕ್ಷರ ಸಹ ಸಂಕಷ್ಟಕ್ಕೆ ತಲುಪುತ್ತದೆ . ದಿನಗೂಲಿ ಕಾರ್ಮಿಕರು  ,ತಿಂಗಳ ಸಂಬಳ ಪಡೆದು ಜೀವನ ಮಾಡೋರು ಸಂಸಾರ ಎನ್ನುವ  ಸಾಗರದಲ್ಲಿ ಬೆಲೆ ಏರಿಕೆಯ ಗಾಳಕ್ಕೆ ಸಿಲುಕಿ  ವಿಲವಿಲ ಒದ್ದಾಡುವಂತಾಗಿದೆ . ಬರುವ ಅಲ್ಪ ಸಂಬಳದಲ್ಲಿ ಮನೆ ಬಾಡಿಗೆ, ಎಲೆಕ್ಟ್ರಿಸಿಟಿ ಬಿಲ್,ವಾಟರ್ ಬಿಲ್,ಮನೆಗೆ ರೇಷನ್ ,ಮಕ್ಕಳ ಫೀಸ್, ಮತ್ತು ಓಡಾಟಕ್ಕೆ ಗಾಡಿಗೆ  ಪೆಟ್ರೋಲ್  , ಹಾಸ್ಪಿಟಲ್ ಖರ್ಚು ಒಂದಾ ಎರಡಾ   ಸಂಸಾರದ  ತಾಪತ್ರೇಯ  . ಮಧ್ಯಮ ವರ್ಗದ ಕುಟುಂಬದವರ ಕಥೆ ಕೇಳೋರು  ಯಾರು ? . ಜನಸಾಮಾನ್ಯರ ಬದುಕಿಗೆ  ಆಸರೆ ಆಗೋರು ಯಾರು . ಬಡಜನರನ್ನು ದೇವರೆ ಕಾಪಾಡಬೇಕು  . ಸರ್ಕಾರಗಳಂತೂ ಕಾಪಾಡುವ ಯಾವ ಲಕ್ಷಣಗಳು ಇಲ್ಲ . 
ಸರ್ಕಾರ ಬಡವರ ಬದುಕಿಗೆ ಭರವಸೆ  ಆಗಬೇಕೆ  ಹೊರತು ಭಯ ಮೂಡಿಸುವ ಭೂತಗಳಂತಾಗಬಾರದು  . 

ವರದಿ :ಬಂಡಯ್ಯ ಹಿರೇಮಠ