ಪೇಜಾವರ ಶ್ರೀಗಳ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ
ಉಡುಪಿಯ ಅಷ್ಟಮಠಾಧೀಶರು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥರು
ಇನ್ನಿಲ್ಲ. 89 ವರ್ಷದ ಶ್ರೀಗಳು
ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ,ಇಂದು ಬೆಳಿಗ್ಗೆ ಸುಮಾರು 9.20ರ ಆಸುಪಾಸಿಗೆ ತಮ್ಮ ಉಸಿರಾಟ ನಿಲ್ಲಿಸಿದ್ದಾರೆ.
ತಮ್ಮ ಏಳನೇ ವಯಸ್ಸಿಗೆ ಸನ್ಯಾಸತ್ವ ಸ್ವೀಕರಿಸಿದ ಶ್ರೀಗಳು ಸುದೀರ್ಘ 83 ವರ್ಷಗಳ ಕಾಲ ಉಡುಪಿಯ ಶ್ರೀ ಕೃಷ್ಣನ ಸೇವೆ ಸಲ್ಲಿಸಿದ್ದಾರೆ. ಉಡುಪಿಯ ಪರ್ಯಾಯ ವ್ಯವಸ್ಥೆಯಲ್ಲಿ ಶ್ರೀಗಳಲ್ಲಿ ಪ್ರಮುಖವಾಗಿ ನಿಲ್ಲುತ್ತಾರೆ, ಶ್ರೀವಾದಿರಾಜ ಸ್ವಾಮೀಜಿಯವರನ್ನು ಬಿಟ್ಟರೆ ಪೇಜಾವರಶ್ರೀಗಳು ಹೆಚ್ಚು ಕಾಲ ಪರ್ಯಾಯದ ಮಠಾಧ್ಯಕ್ಷತೆ ವಹಿಸಿದ್ದರು.
ಶ್ರೀಗಳು ತಮ್ಮ ಇಡೀ ಜೀವನವನ್ನೇ ಧರ್ಮಕ್ಕೆ ಉಡುಪಿಯ ಮಟ್ಟಕ್ಕೆ ನಾಡಿನ ಜನರಿಗೆ ಮೀಸಲಿಟ್ಟಿದ್ದರು. ಶ್ರೀಗಳಿಗೆ ಅಪಾರ ಜನ ಭಕ್ತಾದಿಗಳು ದೇಶ-ವಿದೇಶಗಳಲ್ಲಿ ಇದ್ದಾರೆ. ಅವರ ಅಂತಿಮ ದರ್ಶನವನ್ನು ಉಡುಪಿಯ
ಅಜ್ಜರ ಕಾಡು ಮೈದಾನದಲ್ಲಿ ನಡೆಸಲು ಸಿದ್ಧತೆ ನಡೆಸಿಕೊಂಡಿದ್ದಾರೆ.ನಂತರ ವಿಶೇಷ ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಆವರಣದಲ್ಲಿ ಕೊನೆಯ ದರ್ಶನ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಸಂಜೆ
7 ರ ಹೊತ್ತಿಗೆ ಅವರ ಇಚ್ಛೆಯಂತೆ ಬೆಂಗಳೂರಿನ ವಿದ್ಯಾಪೀಠದ ಮಠದಲ್ಲಿ ಅವರ ಕೊನೆಯ ಕಾರ್ಯಗಳು ಈಡೇರಲಿದೆ.