ಮಂದಿರ ದೇಣಿಗೆಯ ಬೊಕ್ಕಸಕ್ಕೆ ಬಿತ್ತು ಬಾರಿ ಮೊತ್ತದ ಹಣ

ಐತಿಹಾಸಿಕ ರಾಮ ಮಂದಿರ ನಿರ್ಮಾಣದ ಕೆಲಸ ಪ್ರಾರಂಭವಾಗಿದ್ದು, ಇದೆ ಬೆನ್ನಲೇ ಸಾರ್ವಜನಿಕರು ಹಾಗೂ ರಾಮ ಭಕ್ತರು ದೇಣಿಗೆಯನ್ನು ನೀಡುತ್ತಿದ್ದಾರೆ. ಜನ ಸಾಮಾನ್ಯರು ತಮಗೆ ಕೈಲಾದ ಹಣವನ್ನು ಕೊಡುತ್ತಿದ್ದರೇ, ರಾಜಕೀಯ ವ್ಯಕ್ತಿಗಳು ಹಾಗೂ ಸೆಲೆಬ್ರಿಟಿ ಸ್ಟಾರ್ಸ್ ಹೆಚ್ಚಿನ ಮೊತ್ತದ ಹಣವನ್ನ ನೀಡುವ ಮೂಲಕ ರಾಮ ಮಂದಿರ ದೇಣಿಗೆಯ ಬೊಕ್ಕಸವನ್ನು ತುಂಬಿಸುತ್ತಿದ್ದಾರೆ. ಈಗ ಕಾಂಗ್ರೆಸ್ ಶಾಸಕಿ ಬಾರಿ ಮೊತ್ತದ ದುಡ್ಡನ್ನ ದೇಣಿಗೆ ನೀಡಿದ್ದಾರೆ. 

ಬರೋಬ್ಬರಿ 51 ಲಕ್ಷ ದೇಣಿಗೆ ನೀಡಿದ್ದಾರೆ

ಉತ್ತರ ಪ್ರದೇಶದ ರಾಯ್ ಬರೇಲಿ ಊರಿನ ಕಾಂಗ್ರೆಸ್ ಶಾಸಕಿ ಆದಿತಿ ಸಿಂಗ್, ಶ್ರೀ ರಾಮ ಮಂದಿರ ನಿರ್ಮಾಣದ ಪ್ರಕ್ರಿಯೆಗೆ ಬರೋಬ್ಬರಿ 51 ಲಕ್ಷ ದೇಣಿಗೆ ನೀಡಿದ್ದಾರೆ. ಶ್ರೀ ರಾಮ ಜನ ಭೂಮಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾದ ಚಾಂಪತ್ ರಾಯ್  ಗೆ ಹಣವನ್ನ ಹಸ್ತಾಂತರಿಸಿದ್ದೇನೆ ಎಂದು ಶಾಸಕಿ ಆದಿತಿ ಸಿಂಗ್ ತಿಳಿಸಿದ್ದಾರೆ. ದೇಣಿಗೆ ಸಂಗ್ರಹಿಸುವ ಅಭಿಯಾನ ಫೆಬ್ರವರಿ 27 ರ ವರೆಗೆ ನಡೆಯಲಿದೆ. 

ಕಾಂಗ್ರೆಸ್ ವಿರುದ್ಧವೇ ಕಿಡಿಕಾರಿದ್ದ ಶಾಸಕಿ

ಅನೇಕ ಸಂದರ್ಭಗಳಲ್ಲಿ ಕಾಂಗ್ರೆಸ್ ವಿರುದ್ಧವೇ ಶಾಸಕಿ ಅದಿತಿ ಸಿಂಗ್ ಕಿಡಿಕಾರಿದ್ದು, ರಾಯ್ ಬರೇಲಿ ಕ್ಷೇತ್ರದಿಂದ ಗೆದ್ದ ಸೋನಿಯಾ ಗಾಂಧಿ, ಐದು ವರ್ಷದ ಅವಧಿಯಲ್ಲಿ, ಕೇವಲ ಎರಡು ಬಾರಿ ಮಾತ್ರ ಈ ಕ್ಷೇತ್ರಕ್ಕೆ ಆಗಮಿಸಿದ್ದರು ಎಂದು  ಈ ಹಿಂದೆ ಧ್ವನಿ ಎತ್ತಿದ್ದರು. 

ಬರಹ: ಹೆಚ್. ಶ್ರೀ ಹರ್ಷ