ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ...ಅಜಿತ್ ಪವಾರ್ ಉಪಮುಖ್ಯಮಂತ್ರಿ...ಆದಿತ್ಯ ಠಾಕ್ರೆಗೆ ಸಚಿವ ಸ್ಥಾನ.

ಮುಂಬೈ : ಶಿವ ಸೇನೆ ,ಕಾಂಗ್ರೆಸ್ ಹಾಗೂ ಎನ್ ಸಿಪಿ ಮೈತ್ರಿಕೂಟದ ಮಹಾ ವಿಕಾಸ್ ಆಘಾಡಿ (ಎಂವಿಎ) ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು , ಅಜಿತ ಪವಾರ್ ಉಪಮುಖ್ಯಮಂತ್ರಿಯಾಗಿ ಹಾಗೂ ಶಿವ ಸೇನೆ ಶಾಸಕ ಆದಿತ್ಯ ಠಾಕ್ರೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

 ಇನ್ನು ಕಾಂಗ್ರೆಸ್ ನಾಯಕ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್, ಶಂಕರ್‌ರಾವ್‌ ಚೌಹಾಣ್ ಅವರ ಮಗ ದಿಲೀಪ್‌ ವಾಲ್ಸೆ ಪಾಟೀಲ್‌ (ಎನ್‌ಸಿಪಿ)
ಎನ್‌ಸಿಪಿ ಮುಖಂಡ ದನಂಜಯ್ ಮುಂಡೆ, ಮಹಾ ವಿಕಾಸ್‌ ಅಗಡಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್‌ನ ವಿಜಯ್‌ ವಡೆತ್ತೀವಾರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಶಿವಸೇನೆ ,ಕಾಂಗ್ರೆಸ್ ಹಾಗೂ ಎನ್ ಸಿಪಿ ಮೂರು ಪಕ್ಷಗಳ ಒಟ್ಟು 36 ಜನ ಸಂಪುಟಕ್ಕೆ ಸೇರ್ಪಡೆಯಾಗಿದ್ದು ,ಇದರಲ್ಲಿ 26 ಜನ ಸಂಪುಟ ದರ್ಜೆ ಸಚಿವರಾಗಿ ಮತ್ತು 10 ಜನ ರಾಜ್ಯ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.