ಪ್ರೇಮಿಗಳಿಗೆ

ಅಮೇರಿಕಾದ ಫಸ್ಟ್ ಲೇಡಿ ಜಿಲ್ ಬೈಡೆನ್ ತಮ್ಮ ದೇಶದ ಜನತೆಗೆ ಹಾಗು ವಿಶ್ವಕ್ಕೆ "ಪ್ರೇಮಿಗಳ ದಿನದ" ಶುಭಾಶಯ ಕೋರಲು ಈಗಾಗಲೇ ವಿಶೇಷವಾದ ಸಿದ್ಧತೆ ಮಾಡಿಕೊಂಡಿದ್ದಾರೆ.ಹೃದಯದ ಆಕಾರದಲ್ಲಿರುವ ದೈತ್ಯ ಕಟೌಟ್ಗಳನ್ನು ವೈಟ್ ಹೌಸ್  ಹುಲ್ಲು ಹಾಸಿನ ಮೇಲೆ ರಾರಾಜಿಸುವ ಹಾಗೆ ಏರ್ಪಾಟು ಮಾಡಿರುವ ಜಿಲ್.ಇಡೀ ಅಮೆರಿಕನ್ನರಿಗೆ ಹಾಗೂ ವಿಶ್ವಕ್ಕೆ ಒಂದೊಳ್ಳೆ ಸಂದೇಶ ರವಾನೆ ಮಾಡಿದ್ದಾರೆ. ಪ್ರತೀ ಕಟೌಟ್ಗಳು ಈ ಭಾನುವಾರದ ಪ್ರೇಮಿಗಳ ದಿನದ ವರೆಗೂ ವೈಟ್ ಹೌಸ್ ಹುಲ್ಲು ಹಾಸಿನ ಮೇಲೆ ಈ ನಾಲ್ಕು ಸಂದೇಶಗಳನ್ನು ಹೊತ್ತು ತಂದಿವೆ.'ಏಕತೆ' 'ಕರುಣೆ' 'ಸಾಮರ್ಥ್ಯ' 'ಸಹಾನುಭೂತಿ' ಎಂಬ ವಿಶಿಷ್ಟ ಕಲ್ಪನೆಯೊಂದಿಗೆ ಅಮೇರಿಕಾದ ಅಧ್ಯಕ್ಷರ ಪತ್ನಿ ಒಂದು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ,ಜೋ ಬೈಡೆನ್ ಕೂಡ ತಮ್ಮ ಪತ್ನಿಯೊಂದಿಗೆ ಪ್ರೇಮಿಗಳ ದಿನ ಆಚರಿಸಲು ಉತ್ಸುಕರಾಗಿದ್ದಾರೆ. ನಾವೂ ಶಾಂತಿಪ್ರಿಯರು ಎಂಬ ಸಂದೇಶವನ್ನು ಸಾರಲು ಈ ಹದಿನಾಲ್ಕರ ವಿಶೇಷ ದಿವಸಕ್ಕೆ ಸಿದ್ಧರಾಗಿದ್ದಾರೆ...

ವರದಿ- ಹರೀಶ್ ಗೌಡ