ಪೌರತ್ವ ಕಾಯ್ದೆ ಜಾರಿಗೆ ಮುಂದಾದ ಯೋಗಿ ಆದಿತ್ಯನಾಥ್...

ಲಕ್ನೋ : ಪೌರತ್ವ ತಿದ್ದುಪಡಿ ಕಾಯ್ದೆ  ಬಗ್ಗೆ ದೇಶಾದ್ಯಂತ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ. ಕಾಯ್ದೆ ವಿರೋಧಿಸಿ ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ, ಹಿಂಸಾಚಾರಗಳು ಸಹ ನಡೆದಿವೆ. ಇನ್ನು ಇದೆಲ್ಲದರ ಮಧ್ಯೆ ಉತ್ತರ ಪ್ರದೇಶ ಸರ್ಕಾರ ರಾಜ್ಯದಲ್ಲಿ ಕಾಯ್ದೆಯನ್ನು ಜಾರಿ ಮಾಡಲು ಹೊರಟಿದೆ.

ಹೌದು , ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಾಯ್ದೆ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಆ ಮೂಲಕ ಕಾಯ್ದೆಯನ್ನು ಜಾರಿಗೋಳಿಸುತ್ತಿರುವ ಮೊದಲ ರಾಜ್ಯ ಉತ್ತರ ಪ್ರದೇಶವಾಗಲಿದೆ. ದೇಶದಲ್ಲಿ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಕಾಯ್ದೆ ಜಾರಿಯಾಗುತ್ತಿದೆ.

ಇನ್ನು ರಾಜ್ಯ ಸರ್ಕಾರ ಈಗಾಗಲೇ ಜಿಲ್ಲಾಧಿಕಾರಿಗಳಿಗೆ
ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ 
ಅಫಘಾನಿಸ್ತಾನದಿಂದ ವಲಸೆ ಬಂದಿರುವ ಹಿಂದು, ಕ್ರೈಸ್ತ ,ಜೈನ್ ,ಸಿಖ್ , ಬೌದ್ಧ ಹಾಗು ಪಾರ್ಸಿ ಸಮುದಾಯಕ್ಕೆ ಸೇರಿದವರನ್ನು  ಗುರುತಿಸುವಂತೆ ಆದೇಶ ನೀಡಲಾಗಿದೆ.

ಇನ್ನು ಕಾಯ್ದೆ ವಿರೋಧಿಸಿ ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು  ಪ್ರತಿಭಟನೆ ಹಾಗು ಹಿಂಸಾಚಾರಗಳು ನಡೆದಿದ್ದವು. ಆದರೆ ಈಗ ಅದೇ ರಾಜ್ಯದಲ್ಲಿ ಮೊದಲಿಗೆ ಕಾಯ್ದೆ  ಜಾರಿಯಾಗುತ್ತಿರುವುದು ವಿಶೇಷ.

ಇನ್ನು ಪೌರತ್ವ ತಿದ್ದುಪಡಿ ಕಾಯ್ದೆ ಅನ್ವಯ ಪಾಕಿಸ್ತಾನ, ಅಫಘಾನಿಸ್ತನ ಹಾಗು ಬಾಂಗ್ಲಾದೇಶ ದಿಂದ ಡಿಸೆಂಬರ್ 31 , 2014 ರೊಳಗೆ ಭಾರತಕ್ಕೆ ವಲಸೆ ಬಂದಿರುವ ಹಿಂದು, ಕ್ರೈಸ್ತ ,ಜೈನ್ ,ಸಿಖ್ , ಬೌದ್ಧ ಹಾಗು ಪಾರ್ಸಿ ಸಮುದಾಯಕ್ಕೆ ಸೇರಿದವರು ಪೌರತ್ವ ಪಡೆಯಬಹುದು.