ನಿರ್ಭಯಾ ಅತ್ಯಾಚಾರ ಪ್ರಕರಣದ ಅರೋಪಿಗಳಿಗೆ 22 ಜನವರಿ ಗಲ್ಲುಶಿಕ್ಷೆ ಫಿಕ್ಸ್

ನವದೆಹಲಿ: 2012 ರಂದು ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೇರಿಸಲು ದೆಹಲಿ ಕೋರ್ಟ್ ಡೆತ್ ವಾರೆಂಟ್ ಜಾರಿ ಮಾಡಿದೆ.

ನ್ಯಾಯಮೂರ್ತಿ ಸತೀಶ್ ಕುಮಾರ್ ಅರೋರಾ ಆದೇಶ ಹೊರಡಿಸಿದ್ದು ತೀರ್ಪಿನ ವಿರುದ್ಧ ದಿನಗಳೊಳಗೆ ಕಾನೂನಿನ ಮೊರೆ ಹೋಗಬಹುದು ಎಂದು ದೆಹಲಿಯ ಕೋರ್ಟ್ ಹೇಳಿದೆ.

ಜನವರಿ 22 ರಂದು ಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸಲು ಡೆತ್ ವಾರೆಂಟ್ ಜಾರಿಯಾಗಿರುವ ಬಗ್ಗೆ ಅಪರಾಧಿಗಳಿಗೆ ಜೈಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಪರಾಧಿಗಳಾದ ಮುಖೇಶ್, ವಿನಯ್, ಅಕ್ಷಯ್ ಮತ್ತು ಪವನ್ ಅವರಿಗೆ ಗಲ್ಲಿಗೇರಿಸಲು ತಿಹಾರ್ ಜೈಲಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.