ಭಾವಿಪತ್ನಿಯ ಕೈಬರಹ ಶೇರ್ ಮಾಡಿದ ನಿಖಿಲ್..!
ನಿಖಿಲ್ ರೇವತಿ ಕಲ್ಯಾಣಕ್ಕೆ ಜಾಗವೂ ಫಿಕ್ಸ್ ಆಗಿದೆ. ದಿನಾಂಕವೂ ನಿಗದಿಯಾಗಿದೆ. ಏಪ್ರಿಲ್ 17 ರಂದು ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಪ್ರೇಮಿಗಳ ದಿನದಂದು ದೇವಾಲಯಕ್ಕೆ ತೆರಳಿದ್ದ ಜೋಡಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಹವಾ ಸೃಷ್ಟಿಸಿದೆ. ರೇವತಿ ಹಸ್ತಾಕ್ಷರದಲ್ಲಿ ಬರೆದಿರುವ ಸಾಲುಗಳನ್ನು ನಿಖಿಲ್ ಮೆಚ್ಚಿ ಕೊಂಡಾಡಿದ್ದಾರೆ.ಕೈಬರಹಕ್ಕೆ ಸಖತ್ ಹರಿದು ಬರುತ್ತಿದೆ.ಇಬ್ಬರು ಕೈ ಮೇಲೆ ಕೈಯಿಟ್ಟ ಪೋಟೋ ಹಂಚಿಕೊಂಡಿದ್ದಾರೆ. ಈ ಮೂಲಕ ಇಬ್ಬರ ಎಂಗೇಜ್ ಮೆಂಟ್ ರಿಂಗ್ ಸಹ ರಿವೀಲ್ ಆಗಿದೆ. ಟಾಲಿವುಡ್ ನಟರು ಸಹ ಈ ಪೋಟೋಕ್ಕೆ ಕಮೆಂಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.