ಯೇಸು ದಾಸ್ ಹುಟ್ಟು ಹಬ್ಬದ ಸಂಭ್ರಮ.


ಪ್ರತಿಬಾರಿಯಂತೆ ಈ ಸಲವೂ ತಮ್ಮ ಬರ್ತಡೆ ಅನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ ಯೇಸು ದಸ್. ಹತ್ತಕ್ಕೂ ಹೆಚ್ಚು ಭಾಷೆಗಳಲ್ಲಿಸುಮಾರು 80 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಖ್ಯಾತಿ 1940ರಲ್ಲಿ ಕೇರಳದಲ್ಲಿ ಜನಿಸಿದ್ದ ಯೇಸುದಾಸ್, ತಮ್ಮ 21ನೇ ವಯಸ್ಸಿನಲ್ಲಿ ಹಾಡಲು ಶುರುಮಾಡಿದರು. ಹಾರು ದಶಕದಲ್ಲಿ ಕೇಳುಗರಿಗೆ ಸ್ವರ ನಂದ ನೀಡುತ್ತಲೆ ಬಂದಿದ್ದಾರೆ. ಅವರ ಗಾಯನ ಪ್ರತಿಭೆಗೆ ಇದುವರೆಗೆ 8 ಬಾರಿ ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿ ಒಲಿದು ಬಂದಿದೆ. ಐದು ಬಾರಿ ಫಿಲಂಫೇರ್, 43 ಅಧಿಕ ಬಾರಿ ವಿವಿಧ ಭಾಷೆಗಳ ರಾಜ್ಯ ಪ್ರಶಸ್ತಿ ಸಿಕ್ಕಿದೆ.
ಭಾರತ ಸರ್ಕಾರದಿಂದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಗೌರವವನ್ನು ನೀಡಲಾಗಿದೆ. ಒಂದೇ ದಿನ ದಕ್ಷಿಣ ಭಾರತದ ವಿವಿಧ ಭಾಷೆಗಳ ಹದಿನಾರು ಹಾಡುಗಳನ್ನು ರೆಕಾರ್ಡ್ ಮಾಡಿದ ದಾಖಲೆ ಇವರದು. ಕನ್ನಡದಲ್ಲೂ ಅದ್ಭುತ ಗೀತೆಗಳನ್ನು ಯೇಸುದಾಸ್ ಹಾಡಿದ್ದಾರೆ. ಅದರಲ್ಲೂ ರವಿಚಂದ್ರನ್ ಅವರ ಸಿನಿಮಾಗಳ ಸಾಕಷ್ಟು ಜನಪ್ರಿಯ ಗೀತೆ ಯೇಸು ದಾಸ್ ಧ್ವನಿ ಯಲಿದೆ .