ಗತವೈಭವ ಸಾರುವ ಹಂಪಿ ಉತ್ಸವ..!
ವಿಜಯನಗರ ಗತವೈಭವ ಸಾರುವ ಬಳ್ಳಾರಿಯ ಹಂಪಿ ಉತ್ಸವಕ್ಕೆ ನಿನ್ನೆ ಸಂಜೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ.
ಹಂಪಿ ಉತ್ಸವಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, "ಬರುವ ಮಾರ್ಚ್ 5ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್ ನಾಡಿನ ಅನ್ನದಾತನ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ನೀಡುವ ಆಶಯವಿದೆ. ಹಂಪಿ ಮತ್ತು ಅದರ ಸುತ್ತಲಿನ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಿ ಪ್ರವಾಸೋದ್ಯಮ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗುವುದು" ಎಂದು ಭರವಸೆ ನೀಡಿದರು.
'ಗತವೈಭವದಿಂದ ಮೆರೆದ ಹಂಪಿಯ ಕಲ್ಲು ಕಲ್ಲುಗಳು ಅದರ ಗತ ಇತಿಹಾಸ ಸಾರುತ್ತವೆ. ವಿದೇಶಿ ಪ್ರವಾಸಿಗ ಅಬ್ದುಲ್ ರಜಾಕ್ ಹಂಪಿಯನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಬಣ್ಣಿಸಿರುವುದು ಅದಕ್ಕೆ ಸಾಕ್ಷಿ. ಇತಿಹಾಸದ ಪುನರ್ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಕಳೆದ 3 ದಶಕಗಳಿಂದ ಹಂಪಿ ಉತ್ಸವ ಆಚರಿಸಿಕೊಂಡು ಬರುತ್ತಿದೆ. ಉತ್ಸವದ ಅಂಗವಾಗಿ ಮತ್ಸ್ಯಮೇಳ, ಶಿಲ್ಪಕಲಾ ಶಿಬಿರ, ಕುಸ್ತಿ,ಗ್ರಾಮೀಣ ಕ್ರೀಡೆಗಳು, ರಂಗ ಚಟುವಟಿಕೆಗಳ ವಿವಿಧ ನಾಲ್ಕು ವೇದಿಕೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಜೊತೆಗೆ ಹಂಪಿಯ ಸ್ಮಾರಕಗಳ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಭರವಸೆಯನ್ನೂ ನೀಡಿದರು.
ಉತ್ಸವಕ್ಕೆ ಸಿಎಂ ಚಾಲನೆ ನೀಡಿದ ನಂತರ ಗಾಯತ್ರಿ ಪೀಠದ ಬಳಿ ಹಾಕಿರುವ ಶ್ರೀ ಕೃಷ್ಣದೇವರಾಯ ವೇದಿಕೆ ಆಗಮಿಸಿದ ಯಶ್ ಅಭಿಮಾನಿಗಳತ್ತ ಕೈ ಬೀಸಿ ಹೊಸ ವರ್ಷದ ಶುಭಾಶಯ ಕೋರಿದರು. ಹಾಗೂ 'ಇತಿಹಾಸ ಹಾಗೇ ಸೃಷ್ಟಿ ಆಗಲ್ಲ. ಈ ಮಣ್ಣಿನಲ್ಲಿ ಒಂದು ಪವರ್ ಇದೆ ಅದಕ್ಕೆ ದೇಶದ ಅತ್ಯಂತ ಉನ್ನತ ಇತಿಹಾಸ ನಿರ್ಮಾಣ ಆಗಿದೆ. ಆದ್ರೆ ಈ ಐತಿಹಾಸಿಕ ಸ್ಥಳವನ್ನು ಕಾಪಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ' ಎಂದು ವಿಜಯನಗರದ ಸಂಸ್ಕೃತಿಯನ್ನು ಕಾಪಾಡಬೇಕೆಂದು ಜಾಗೃತಿ ಮೂಡಿಸಿದರು .ಇತ್ತ ಯಶ್ ಅಭಿಮಾನಿಗಳು ಯಶ್ ವೇದಿಕೆಗೆ ಬರಲು ಬಳಸಿದ ಕಾರ್ ಮುಂದೆ ನಿಂತು ವಿವಿಧ ಭಂಗಿಯಲ್ಲಿ ಫೋಟೊ ತೆಗೆಸಿಕೊಂಡರು.