ರಮೇಶ್ ಅರವಿಂದ್ ಮಾಡಿದ ಮೂರು ತಪ್ಪುಗಳು...
ರಮೇಶ್ ಅರವಿಂದ್ ಮಾಡಿದ ಮೂರು ತಪ್ಪುಗಳು...
ಕನ್ನಡ ಸಿನೆ ಪಯಣದಲ್ಲಿ 30 ವರ್ಷಗಳನ್ನು ಪೂರೈಸಿದರೂ, ಇವತ್ತಿಗೂ ಯಂಗ್ ಅಂಡ್ ಎನರ್ಜೆಟಿಕ್ ಆಗಿ ಕಾಣುವ ನಟ ಅಂದ್ರೇ ಅದು ರಮೇಶ್ ಅರವಿಂದ್. ಕನ್ನಡದಲ್ಲಿ 100 ಸಿನಿಮಾಗಳನ್ನು ಪೂರೈಸಿರುವ ರಮೇಶ್ ಅರವಿಂದ್, ತಮ್ಮ101 ನೇ ಸಿನಿಮಾ 'ಶಿವಾಜಿ ಸುರತ್ಕಲ್' ಮೂಲಕ ಇದೇ ಫೆಬ್ರವರಿ 21ರಂದು ಮತ್ತೆ ಪ್ರೇಕ್ಷಕರೆದುರು ಬರುತಿದ್ದಾರೆ.
ಈ ಚಿತ್ರದಲ್ಲಿ ರಮೇಶ್ ಅರವಿಂದ್ ತಮ್ಮ ಹಿಂದಿನ ಸಿನಿಮಗಳಿಗಿಂತ ವಿಭಿನ್ನವಾದ, ತುಂಬಾ ಇಂಟರೆಸ್ಟಿಂಗ್ ಮತ್ತು ರೂಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಗೌರೀಶ್ ಅಕ್ಕಿ ಸ್ಟುಡಿಯೋ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸಿನಿಮಾದಲ್ಲಿನ ಪಾತ್ರ ಸೇರಿದಂತೆ ತಮ್ಮ ಬದುಕಿನ ಹಲವು ಸ್ವಾರಸ್ಯಕರ ಅಂಶಗಳನ್ನು ಹಂಚಿಕೊಂಡಿದ್ದಾರೆ.
ರಮೇಶ್ ಅರವಿಂದ್ ಮಾಡಿದ ಆ ಮೂರು ತಪ್ಪುಗಳು...!
ಇನ್ನು ಸಂದರ್ಶನ ವೇಳೆ ನಿರೂಪಕ ಗೌರೀಶ್ ಅಕ್ಕಿ ರಮೇಶ್ ಅರವಿಂದ್ ರವರ 30 ವರ್ಷಗಳ ಸಿನಿ ಜರ್ನಿ ಕುರಿತು ಹಲವು ಪ್ರಶ್ನೆಗಳನ್ನು ಕೇಳಿದರು. ಅದರಲ್ಲೂ ನೀವು ಮಾಡಿದ ಮರೆಯಲಾಗದ ಮೂರು ತಪ್ಪುಗಳು ಯಾವುವು ಎಂಬ ಅಕ್ಕಿ ಪ್ರಶ್ನೆಗೆ, ರಮೇಶ್ ಅರವಿಂದ್ ನಗುತ್ತಾ " ಸುಮಾರು ತಪ್ಪುಗಳನ್ನು ಮಾಡಿದ್ದೇನೆ .ಅದರಲ್ಲಿ ತುಂಬಾ ಮುಖ್ಯವಾದ ತಪ್ಪುಗಳೆಂದರೆ ಎಲ್ಲರಿಗೂ ನೈಸ್ ಆಗಿದ್ದೆ. ಯಾರು ಏನೇ ಹೇಳಿದ್ರು, ಆಸಕ್ತಿ ಇಲ್ಲದಿದ್ದರು ಎಸ್ ಎಸ್ ಅಂತ ಒಪ್ಪಿ ಕೊಳ್ಳುತ್ತಿದ್ದೆ. ಆದ್ರೆ ಈಗ ನೋ ಎಂದು ಹೇಳುತ್ತಿದ್ದೇನೆ. ಇದು ನನ್ನ ಮೊದಲ ತಪ್ಪು..
ಎರಡನೆಯದು ನಿರ್ದೇಶನ ಮಾಡುವ ಆಸೆ ಮೊದಲೇ ಇದ್ದರೂ, ತುಂಬಾ ವರ್ಷಗಳ ನಂತರ ನಿರ್ದೇಶನ ಮಾಡಲು ಶುರು ಮಾಡಿದೆ.ಮುಂಚೆಯೇ ಒಳ್ಳೆ ಒಳ್ಳೆ ಸಿನಿಮಾಗಳನ್ನು ಕೊಡಬೇಕಿತ್ತು ಎಂದು ಅನ್ನಿಸಿದ್ಡಿದೆ. ಕೊನೆಯದಾಗಿ ಬೇರೆ ಭಾಷೆಗಳಲ್ಲಿಯೂ ಹೆಚ್ಚು ಸಿನಿಮಾಗಳನ್ನು ಮಾಡಬೇಕಿತ್ತು ಎಂದು ಹೇಳಿದರು. ಹೀಗೆ ತಮ್ಮ ವೃತ್ತಿ ಜೀವನದ ಮೂರು ದೊಡ್ಡ ತಪ್ಪುಗಳ ಬಗ್ಗೆ ರಮೇಶ್ ಅರವಿಂದ್ ಮುಕ್ತವಾಗಿ ಮಾತನಾಡಿದರು. ಇದರೊಂದಿಗೆ ತಮ್ಮ ಮೆಚ್ಚುಗೆಯ ಮೂವರು ನಾಯಕಿಯರು, ಮೂವರು ನಿರ್ದೇಶಕರು, ಮೂರು ಹಾಡುಗಳು ಹೀಗೆ ಸಾಕಷ್ಟು "ಮೂರು"ಗಳನ್ನು ಹಂಚಿಕೊಂಡಿದ್ದಾರೆ.
ಇನ್ನು ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ರಮೇಶ್ ಅರವಿಂದ್ ರವರು ಡಿಟೆಕ್ಟಿವ್ ಆಗಿ ಪ್ರೇಕ್ಷಕರ ಗಮನ ಸೆಳೆಯಲಿದ್ದಾರೆ. ಈ ಚಿತ್ರಕ್ಕೆ ಆಕಾಶ್ ಶ್ರೀವತ್ಸವ್ ಆಕ್ಷನ್ ಕಟ್ ಹೇಳಿದ್ದು, ಮುಖ್ಯಪಾತ್ರಗಳಲ್ಲಿ ರಾಧಿಕಾ ನಾರಾಯಣ್, ಅವಿನಾಶ್, ರಮೇಶ್ ಪಂಡಿತ್ ಮತ್ತು ಆರೋಹಿ ನಾರಾಯಣ್ ಕಾಣಿಸಿಕೊಂಡಿದ್ದಾರೆ.
ಈ ಪೂರ್ಣ ಸಂದರ್ಶನ ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಲಭ್ಯವಿದ್ದು, ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್ ಒತ್ತಿ.
https://youtu.be/qI0zC1ilzAo