ಇನ್ನು ಮುಗಿಯದ ಸಂಪುಟ ಸಂಕಟ : ಯಡಿಯೂರಪ್ಪ ದೆಹಲಿ ಪ್ರವಾಸ ಮತ್ತೆ ರದ್ದು...

ಬೆಂಗಳೂರು : ಕಳೆದೊಂದು ತಿಂಗಳಿನಿಂದ ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಸಂಪುಟ ಸಂಕಟ ಬಗೆಹರಿಸಬೆಕೇಂಬ ಆತುರದಲಿದ್ದ ಮುಖ್ಯ ಮಂತ್ರಿ ಯಡಿಯುರಪ್ಪರ ವೇಗಕ್ಕೆ ಹೈಕಮಾಂಡ್ ಮತ್ತೊಮ್ಮೇ ತಡೆಯೋಡ್ಡಿದೆ.

ಇನ್ನು ಉಪಚುನಾವಣೆಯಲ್ಲಿ ಗೆದ್ದ ಬಳಿಕ ಮಂತ್ರಿಯಾಗುವ ಕನಸು ಕಾಣುತಿದ್ದವರಿಗೂ ಬಿಜೆಪಿ  ಹೈಕಮಾಂಡ್ ನಡೆ ಸಾಕಷ್ಟು ಬೇಸರ ತರಿಸಿದ್ದು , ಯಡಿಯೂರಪ್ಪ ಎದುರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ರಾಯಚೂರಿನ ದೇವದುರ್ಗ ದಲ್ಲಿನ ಕಾರ್ಯಕ್ರಮವನ್ನು ಮುಗಿಸಿ ತರಾತುರಿಯಲ್ಲಿ ಬೆಂಗಳೂರಿಗೆ ಆಗಮಿಸಿದ ಯಡಿಯೂರಪ್ಪ ದೆಹಲಿಗೆ ತೆರಳಲು ಸಿದ್ಧತೆ ನಡೆಸಿದ್ದರು. ಆದರೆ ಅಮಿತ್ ಶಾ ಭೇಟಿಗೆ ಅವಕಾಶ ನೀಡದ ಕಾರಣ ಕೊನೆ ಘಳಿಗೆಯಲ್ಲಿ ತಮ್ಮ ಪ್ರವಾಸ ರದ್ದುಗೊಳಿಸಿದರು.

ಇನ್ನು ಜ.17 ರ ರಾತ್ರಿಯಂದು ಬೆಂಗಳೂರಿಗೆ ಅಮಿತ್ ಶಾ ಬರಲಿದ್ದು, ಅದೇ ದಿನ ರಾತ್ರಿ ಅಥವಾ ಜನ್ 18 ರ ಬೆಳಿಗ್ಗೆ ಸಂಪುಟ ವಿಸ್ತರಣೆ ಕುರಿತು ಯಡಿಯೂರಪ್ಪ ನವರೊಂದಿಗೆ ಚರ್ಚಿಸುವ ಸಾಧ್ಯತೆಗಳಿವೆ.ಅಂದಿನ ಮಾತುಕತೆ ಯಶಸ್ವೀಯಾದರೆ ಜ. 19 ರಂದು ಸಂಪುಟ ವಿಸ್ತರಣೆಯಾಗಲಿದೆ.