ಮಂಗಳೂರು ನಿಷೇಧಾಜ್ಞೆ ಉಲ್ಲಂಘನೆ: ಲಾಠಿ ಪ್ರಹಾರ
ಮಂಗಳೂರು: ಸೆಕ್ಷನ್ 144ರ ನಿಷೇಧಾಜ್ಞೆ ನಡುವೆಯೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಗೇಟ್ ಮುಂಭಾಗ ಪ್ರತಿಭಟನೆಗೆ ಯತ್ನ ಮಾಡಿದ್ದ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ, ಆಶ್ರುವಾಯು ಪ್ರಯೋಗ ನಡೆಸಿದರು
ಡಿ.20ರವರೆಗೆ ದ.ಕ ಜಿಲ್ಲೆಯಾದ್ಯಂತ ಈಗಾಗಲೇ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ. ಅದರ ನಡುವೆಯೇ ದಿಢೀರ್ ಆಗಿ ಗುಂಪು ಸೇರಿ ನಗರದ ಸ್ಟೇಟ್‌ಬ್ಯಾಂಕ್ ವೃತ್ತದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಮುಂದಾಗಿದ್ದರು. ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿದ್ದ ಯುವಕರ ಗುಂಪು ಪೊಲೀಸರಿಗೂ ದಿಕ್ಕಾರ ಕೂಗುತ್ತಿದ್ದರು. ದೊಡ್ಡ ಸಂಖ್ಯೆಯಲ್ಲಿದ್ದ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.