ಕ್ರಿಕೆಟ್ ಇತಿಹಾಸದಲ್ಲೇ ಅದ್ಭುತ ಸಾಧನೆ ಮಾಡಲಿರುವ ರಾಸ್ ಟೇಲರ್....!
ಕ್ರಿಕೆಟ್ ಇತಿಹಾಸದಲ್ಲೇ ಅದ್ಭುತ ಸಾಧನೆ ಮಾಡಲಿರುವ ರಾಸ್ ಟೇಲರ್....!
ಇದೇ ತಿಂಗಳ 21 ರಿಂದ ಆರಂಭವಾಗಲಿರುವ ಕೀವಿಸ್ ಮತ್ತು ಟೀಮ್ ಇಂಡಿಯಾ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯ ದ ಮೂಲಕ ರಾಸ್ ಟೇಲರ್ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ 100 ಪಂದ್ಯಗಳಲ್ಲಿ ಕಣಕ್ಕಿಳಿದ ಹೆಗ್ಗಳಿಕೆಗೆ ಪಾತ್ರರಾಗಿ ಕ್ರಿಕೆಟ್ ಇತಿಹಾಸದಲ್ಲೇ ಅತ್ಯದ್ಭುತ ಸಾಧನೆ ಮಾಡಿದ ಏಕೈಕ ಆಟಗಾರ ಎನಿಸಲಿದ್ದಾರೆ.
ನೂರನೇ ಟೆಸ್ಟ್ ಆಡಲಿದ್ದಾರೆ ರಾಸ್ ಟೇಲರ್:
ರಾಸ್ ಟೇಲರ್ ಈವರೆಗೂ 99 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು ಟೀಮ್ ಇಂಡಿಯಾ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯ ಅವರ ನೂರನೇ ಪಂದ್ಯವಾಗಲಿದೆ.
ರಾಸ್ ಟೇಲರ್ 2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು 99 ಟೆಸ್ಟ್, 231 ಏಕದಿನ ಮತ್ತು 100 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ನ್ಯೂಜಿಲೆಂಡ್ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಪ್ರತಿನಿಧಿಸಿದ ಕೀರ್ತಿಯೂ ರಾಸ್ ಟೇಲರ್ ಹೆಸರಿನಲ್ಲಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ರಾಸ್ ಟೇಲರ್ 99 ಪಂದ್ಯಗಳಲ್ಲಿ 19 ಶತಕವನ್ನು ಮತ್ತು 33 ಅರ್ಧ ಶತಕಗಳನ್ನು ದಾಖಲಿಸಿದ ಸಾಧನೆಯನ್ನು ಮಾಡಿದ್ದಾರೆ. ಏಕದಿನದಲ್ಲಿ 21 ಶತಕ ದಾಖಲಿಸಿದ್ದು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಪರವಾಗಿ ಅತಿ ಹೆಚ್ಚು ಶತಕವನ್ನು ದಾಖಲಿಸಿದ ಕೀರ್ತಿಯೂ ಟೇಲರ್ ಹೆಸರಿನಲ್ಲಿದೆ.
ನ್ಯೂಜಿಲೆಂಡ್ ಮತ್ತು ಟೀಮ್ ಇಂಡಿಯಾ ಮಧ್ಯೆ ಟಿ20 ಮತ್ತು ಏಕದಿನ ಸರಣಿ ಮುಕ್ತಾಯವಾಗಿದೆ. ಟಿ20ಯನ್ನು ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡರೆ ಏಕದಿನವನ್ನು ನ್ಯೂಜಿಲೆಂಡ್ ವೈಟ್‌ವಾಶ್ ಮಾಡಿ ವಶಕ್ಕೆ ಪಡೆಯಿತು. ಇದೀಗ ಎರಡೂ ತಂಡಗಳು ಟೆಸ್ಟ್ ಸರಣಿಗಾಗಿ ಸಜ್ಜಾಗಿವೆ.