ಭಾರತೀಯ ವೇಗಿಗಳು ವಿಶ್ವದಲ್ಲೇ ಯಾಕೆ ಬೆಸ್ಟ್ ಎಂಬುದನ್ನು ಮಗದೊಮ್ಮೆ ಸಾಬೀತು ಮಾಡಿದ್ದಾರೆ.

ಟೆಸ್ಟ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತ ಸೋಲಿಲ್ಲದ  ಸರದಾರನಾಗಿ  ಮುನ್ನುಗ್ಗುತ್ತಿದೆ ಈಗ  ನ್ಯೂಜಿಲೆಂಡ್ ವಿರುದ್ಧ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಭಾರತೀಯ ವೇಗಿಗಳು ಮಗದೊಮ್ಮೆ ಮಿಂಚಿನ ದಾಳಿ ಮಾಡಿ ಮಿಂಚ್ತಾರೆ.ನ್ಯೂಜಿಲೆಂಡ್ ಇಲೆವೆನ್  ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು  ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ನಿಖರ ದಾಳಿಯ ಮೂಲಕ ಪೆವಿಲಿಯನ್ ದಾರಿ ತೋರಿಸಿದರು. ನಂತರ ಇವರಿಗೆ ನವದೀಪ್ ಸೈನಿ ಕೈಜೋಡಿಸಿದರು. ಪರಿಣಾ ಕಿವೀಸ್ ಬ್ಯಾಟ್ಸ್‌ಮನ್‌ಗಳು ಬಿಟ್ಟು ಬಿಡದೆ ಕಾಡಿದರು, ಪರಿಣಾಮ ಎರಡನೇ ದಿನದಾಟದಲ್ಲಿ ನ್ಯೂಜಿಲೆಂಡ್ ಇಲೆವೆನ್ 235 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿದೆ.