ರಸ್ತೆಯ ಸಿಗ್ನಲ್ ಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುವ ಮಕ್ಕಳ ಮಾಹಿತಿ ಸಂಗ್ರಹಿಸಿ - ಹೈಕೋರ್ಟ್ ಸೂಚನೆ
ನಗರದ ರಸ್ತೆ ಬದಿ ಮತ್ತು ಸಿಗ್ನಲ್ ಗಳಲ್ಲಿ ಆಟಿಕೆಗಳು ಮತ್ತು ವಸ್ತುಗಳನ್ನು ಮಾರಾಟ ಮಾಡುವ ಮಕ್ಕಳ ಕುರಿತು ಮಾಹಿತಿ ಸಂಗ್ರಹಿಸಿ ಎಂದು ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಗೆ ಹೈಕೋರ್ಟ್ ನಿರ್ದೇಶಿಸಿದೆ .
ಈ ಕುರಿತಂತೆ 'ಲೆಟ್ಜ್ ಕಿಟ್ಜ್ ಫೌಂಡೇಷನ್ " ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡಿಸಿದ ಮುಖ್ಯ ನ್ಯಾಯಮೂರ್ತಿ ಎ .ಎಸ್ .ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿತು .
ಮಕ್ಕಳನ್ನು ಪತ್ತೆ ಹಚ್ಚುವ ಮಾಹಿತಿ ಸಂಗ್ರಹ ಮಾಡುವ ತಂಡಗಳಿಗೆ ವಾಹನ ,ಊಟ ಅಗತ್ಯ ಸವಲತ್ತುಗಳು ಬಿಬಿಎಂಪಿ ಒದಗಿಸಬೇಕು ಎಂದು ತಿಳಿಸಿದೆ . ಈ ಕಾರ್ಯಕ್ಕೆ ಏನ್ ಜಿ ಓ ಗಳ ನೆರವು ಪಡೆದು ಕೊಳ್ಳಬೇಕು ಎಂದು ಸೂಚಿಸಿದೆ .
ವರದಿ :ಬಂಡಯ್ಯ ಹಿರೇಮಠ