ವಿಶ್ವದಾದ್ಯಂತ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡುತ್ತಿರುವವರಲ್ಲಿ ಹೆಚ್ಚಿನವರು ವಿದ್ಯಾವಂತರು, ಮತ್ತು ವಿವಿಧ ಕ್ಷೇತ್ರದಲ್ಲಿ ನುರಿತವರೆ ಆಗಿದ್ದಾರೆ : ಮೋದಿ

ಪ್ರಧಾನಿ ಮೋದಿ ಅವರು ವಿಶ್ವಭಾರತಿ ವಿಶ್ವ ವಿದ್ಯಾನಿಲಯದ ಘಟಿಕೋತ್ಸವದ ಸಮಾರಂಭವನ್ನ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು. 'ಗುರುದೇವ ರವೀಂದ್ರನಾಥ ಟ್ಯಾಗೋರ್ ರವರು ಶಾಂತಿನಿಕೇತನದಲ್ಲಿ ವಿಶ್ವಭಾರತಿಯನ್ನ ಸ್ಥಾಪಿಸಿದರು. ಅದರ ಉದ್ದೇಶ ಭಾರತೀಯರಿಗೆ ಉತ್ತಮ ಶಿಕ್ಷಣ, ಆದುನಿಕ ಶಿಕ್ಷಣ ಒದಗಿಸುವುದರ ಜೊತೆಗೆ ಪಾಶ್ಚಿಮಾತ್ಯರ ಅದೀನತೆಯಿಂದ ಭಾರತವನ್ನ ಮುಕ್ತಿಗೊಳಿಸುವುದಾಗಿತ್ತು. ಗುರುದೇವ ಈ ಶಿಕ್ಷಣ ಸಂಸ್ಥೆಯನ್ನ ಕಟ್ಟುವುದರ ಮೂಲಕ ಭಾರತೀಯ ಸಂಸ್ಕೃತಿಯನ್ನ ಸಾಮರ್ಥ್ಯವನ್ನ ಅರಿತುಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ' ಎಂದು ಹೇಳಿದರು. ಅಂತೆಯೇ ಈಗ ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿ ಆತ್ಮ ನಿರ್ಭರ ಭಾರತದ ಕಡೆಗೆ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು ಸಂಶೋಧನೆ ಮತ್ತು ನಾವಿನ್ಯತೆಗೆ ಬಲವನ್ನ ನೀಡುತ್ತದೆ ಎಂದು ಅವರು ಹೇಳಿದರು. ವಿಶ್ವಭಾರತಿಯ  ಸ್ಫೂರ್ತಿದಾಯಕ ಪರಂಪರೆಯನ್ನ ಶ್ಲಾಘೀಸುತ್ತ ಮಾತನಾಡಿದ ಮೋದಿ, ವಿದ್ಯಾರ್ಥಿಗಳು ವಿಶ್ವಭಾರತಿ ದತ್ತು ತೆಗೆದುಕೊಂಡಿರುವ ಹಳ್ಳಿಗಳ ರೈತರು ಮತ್ತು ಕುಶಲ ಕರ್ಮಿಗಳು ತಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಗಳನ್ನ ಹುಡುಕಲು ಸಹಾಯ ಮಾಡುವಂತೆ ಕೇಳಿಕೊಂಡರು.
ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡುವಾಗ ಸಿದ್ದಂತಾ ಮತ್ತು ಮನೋಧರ್ಮದ ಬಗ್ಗೆ ಮಾತನಾಡಿದ ಪ್ರಧಾನಿ "ನೀವು ಏನು ಮಾಡುತ್ತೀರಿ ಎಂಬುದು ನಿಮ್ಮ ಮನಸ್ಥಿತಿ ಸಕಾರಾತ್ಮಕ ಅಥವಾ ಋಣಾತ್ಮಕವಾಗಿದೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ : ವಿಶ್ವದಾದ್ಯಂತ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡುತ್ತಿರುವ ಅನೇಕ ಜನರು ಹೆಚ್ಚು ವಿದ್ಯಾವಂತರು, ಹೆಚ್ಚು ವಿವಿಧ ಕ್ಷೇತ್ರದಲ್ಲಿ ನುರಿತವರು ಆಗಿದ್ದಾರೆ. ಹಾಗೆಯೇ ಮತ್ತೊಂದೆಡೆ, ಕೋವಿಡ್‌ನಂತಹ ಸಾಂಕ್ರಾಮಿಕ ರೋಗದಿಂದ ಜನರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಲ್ಲಿ ದುಡಿಯುತ್ತಿರುವ ಜನರಿದ್ದಾರೆ. ಇದು ಮನೋಧರ್ಮ,ನಾವು ಸಮಸ್ಯೆಯ ಭಾಗವಾಗಬೇಕೆ ಅಥವಾ ಬೇಡವೇ ನಿರ್ಧರಿಸುವುದು ನ ನಮ್ಮ ಕೈಯಲ್ಲಿದೆ.ನಿಮ್ಮ ಉದ್ದೇಶ ಸ್ಪಷ್ಟವಾಗಿದ್ದರೆ ಮತ್ತು ನಿಮ್ಮ ನಿಷ್ಠೆಯು "ಮಾ ಭಾರತಿ" (ಮಾತೃಭೂಮಿ) ಕಡೆಗೆ ಇದ್ದರೆ, ಪ್ರತಿ ನಿರ್ಧಾರವು ಮಹತ್ವದಾಗಿರುತ್ತದೆ ಮತ್ತು ಅರ್ಥ ಪೂರ್ಣವಾಗಿರುತ್ತದೆ ಎಂದು ಪ್ರಧಾನಿ ಹೇಳಿದರು. ಜ್ಞಾನದ ಮಹತ್ವವನ್ನು ಎತ್ತಿ ತೋರಿಸಿದ ಮೋದಿ, "ಜ್ಞಾನ, ಶಿಕ್ಷಣ ಮತ್ತು ಕೌಶಲ್ಯ" ಸ್ಥಿರವಾಗಿರುವುದಲ್ಲ , ಅದು ನಿರಂತರ ಪ್ರಕ್ರಿಯೆ ಎಂದರು. ಸಮಾರಂಭದಲ್ಲಿ 2535 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ವರದಿ : ಪ್ರೀತಿಕಾ ಹೆಗ್ಡೆ