ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾ ದಿಂದ ದೂರ ಉಳಿದಿದ್ದೇಕೇ..?

ಸೋಷಿಯಲ್ ಮೀಡಿಯಾ..... ಬಹುಶಃ ಇಂದಿನ ಜಗತ್ತನ್ನು ಆಳುತ್ತಿರುವುದು ಇವುಗಳೇ ಎಂದರೆ ತಪ್ಪಾಗಲಾರದು. ಇತ್ತೀಚಿಗಂತೂ ಇವುಗಳ ಅಬ್ಬರ ಮಿತಿಮೀರಿದೆ. ಹದಿಹರೆಯದ ಯುವಕರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಸೋಷಿಯಲ್ ಮೀಡಿಯಾಗಳ  ಚಟಕ್ಕೆ ಅಂಟಿಕೊಂಡಿದ್ದಾರೆ. ಫೇಸ್ ಟು ಫೇಸ್ ಮಾತಾಡೋರಿಗಿಂತ ಫೇಸ್ ಬುಕ್ ನಲ್ಲಿ  ಮಾತಾಡೋರೆ ಜಾಸ್ತಿ.

ಆದರೆ ಸ್ಯಾಂಡಲ್ ವುಡ್ ನ ಶ್ರೀಮನ್ನಾರಾಯಣ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮಾತ್ರ ಕಳೆದೊಂದು ವರ್ಷದಿಂದ ಸೋಷಿಯಲ್ ಮೀಡಿಯಾದಿಂದ ಕಾಣೆಯಾಗಿದ್ದರು.ಹಾಗಾದರೆ ರಕ್ಷಿತ್ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದೇಕೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. 

ಈ ಪ್ರಶ್ನೆಗೆ Gaurish Akki Studio ಗೆ ನೀಡಿದ ಸಂದರ್ಶನದಲ್ಲಿ ಉತ್ತರಿಸಿರುವ ರಕ್ಷಿತ್ ಶೆಟ್ಟಿ   "ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಉಳಿದವರು ಕಂಡಂತೆ ಸಿನಿಮಾ ಸಮಯದಲ್ಲಿ ನಾನು ದಿನದ 4-5 ಗಂಟೆ ಸೋಷಿಯಲ್ ಮೀಡಿಯಾದಲ್ಲಿ ಕಳೆಯುತ್ತಿದ್ದೆ. ಆದರೆ ಬರಬರುತ್ತಾ ನಾನು ಅವುಗಳಿಗೆ ಅಡಿಕ್ಟ್ ಆದೆ.
ಇದರಿಂದ ನನಗೆ ಪುಸ್ತಕ ಓದಲು, ಮ್ಯೂಸಿಕ್ ಕೇಳಲು ಸಮಯ ಸಿಗದಂತಾಯಿತು. ಪುಸ್ತಕ ಓದದ ಹೊರತು, ಮ್ಯೂಸಿಕ್ ಕೇಳದ ಹೊರತು ನನ್ನೊಳಗಿನ ಕ್ರಿಯೇಟಿವ್ ಪರ್ಸನ್ ಬೆಳೆಯಲು ಸಾಧ್ಯವಿಲ್ಲ.ಮತ್ತು ಸೋಶಿಯಲ್ ಮೀಡಿಯಾದಲ್ಲಿ ಬರುತಿದ್ದ ನೆಗೆಟಿವ್ ಕಮೆಂಟ್ ಗಳು ಕೂಡ ನನ್ನನ್ನು ಕಾಡುತ್ತಿದ್ದವು . ಹಾಗಾಗಿ ನಾನು ಸೋಶಿಯಲ್ ಮೀಡಿಯಾದಿಂದ ದೂರ ಉಳಿಯಲು ನಿರ್ಧರಿಸಿದ್ದೆ."  ಎಂದು ಹೇಳಿದರು.

ಇನ್ನು ಇದೇ ಡಿಸೆಂಬರ್ 27 ರಂದು ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ಬಿಡುಗಡೆಯಾಗುತ್ತಿದ್ದು , ಸಿನಿಮಾದ ಅಪ್ಡೇಟ್ ಗಳನ್ನು ನೀಡಲು ಹಾಗೂ ಫ್ಯಾನ್ಸ್ ಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಮತ್ತೇ ಸೋಷಿಯಲ್ ಮೀಡಿಯಾ ಗೆ ಎಂಟ್ರಿ ಕೊಟ್ಟಿದ್ದಾರೆ.

ರಕ್ಷಿತ್ ಶೆಟ್ಟಿ ಅವರ ಸಂದರ್ಶನವನ್ನು ನೋಡಲು gaurish akki studio ಯೂಟ್ಯೂಬ್ ಚಾನೆಲ್ ಗೆ ಭೇಟಿ ನೀಡಿ. ಅಥವಾ ಈ ಕೆಳಗಿನ ಲಿಂಕ್ ನ್ನು ಒತ್ತಿ.

https://youtu.be/MBaB8f16jG0