ಯೋಗ್ಯತೆ ಇಲ್ಲದವರನ್ನು ಆಯ್ಕೆ ಮಾಡಲಾಗುತ್ತಿದೆ.! ಉತ್ತರಾಖಾಂಡ್ ಕ್ರಿಕೆಟ್ ಮಂಡಳಿಯ ಮೇಲೆ ಅಸಮಾಧಾನ.!ವಾಸಿಮ್ ಜಾಫರ್ ರಾಜಿನಾಮೆ
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಾಸಿಮ್ ಜಾಫರ್ ಉತ್ತರಾಖಂಡ್ ಕ್ರಿಕೆಟ್ ತಂಡದ ಪ್ರಮುಖ ತರಬೇತುದಾರ ಹುದ್ದೆಯಿಂದ ಹಿಂದೆ ಸರಿದಿದ್ದಾರೆ. ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಪಕ್ಷಪಾತದ ಕಾರಣ ನೀಡಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತಂಡದ ಆಯ್ಕೆಗಾರರು ಮತ್ತು ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿಯವರು ಯೋಗ್ಯರಲ್ಲದ ಆಟಗಾರರನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಜಾಫರ್ ಆರೋಪಿಸಿದ್ದಾರೆ.
ಕ್ರಿಕೆಟ್ ಅಸೋಸಿಯೇಷನ್ ಆಫ್ ಉತ್ತರಾಖಂಡ್‌ಗೆ ಜಾಫರ್ ಕಳಿಸಿರುವ ಇಮೇಲ್‌ನಲ್ಲಿ “ಯೋಗ್ಯ ಆಟಗಾರರು ಅವಕಾಶ ವಂಚಿತರಾಗುತ್ತಿರುವುದು ನನಗೆ ಬೇಸರ ತಂದಿದೆ ಎಂದು ಹೇಳಿದ್ದಾರೆ. ತಂಡದ ಅಭಿವೃದ್ಧಿ ಮತ್ತು ಉತ್ತಮ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ನಾನು ಕೆಲವೊಂದು ನಿರ್ಧಾರ ತೆಗೆದುಕೊಳ್ಳುಬೇಕಾಗುತ್ತದೆ. ಆದರೆ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳದಂತಹ ವಾತಾವರಣವನ್ನು ಅಸೋಸಿಯೇಷನ್‌ನ ಕಾರ್ಯದರ್ಶಿ ಸೃಷ್ಟಿ ಮಾಡಿದರೆ…… ನಾನು ಪುರಷರ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರನಾಗಿ ಕೆಲಸ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಜಾಫರ್ ಇಮೇಲ್‌ನಲ್ಲಿ ತಿಳಿಸಿದ್ದಾರೆ.
ಮುಖ್ಯ ತರಬೇತುದಾರನಾಗಿ ಆಯ್ಕೆಯಾದ ವಾಸಿಮ್ ಜಾಫರ್‌ಗೆ ಎಲ್ಲ ರೀತಿಯ ಸಹಕಾರ ನೀಡಲಾಗಿತ್ತು, ಆದರೆ ಅವರು ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಅತಿಯಾಗಿ ಹಸ್ತಕಪ ಮಾಡುತ್ತಿದ್ದರು ಎಂದು ಕ್ರಿಕೆಟ್ ಅಸೋಸಿಯೇಷನ್ ಆಫ್ ಉತ್ತರಾಖಂಡ್‌ನ ಕಾರ್ಯದರ್ಶಿ ಮಹಿಮ್ ವರ್ಮಾ ತಿಳಿಸಿದ್ದಾರೆ.
2020 ಜೂನ್‌ನಲ್ಲಿ ವಾಸಿಮ್ ಜಾಫರ್‌ರನ್ನು ರಾಜ್ಯ ತಂಡದ ಮುಖ್ಯ ತರಬೇತುದಾರನಾಗಿ ಆಯ್ಕೆ ಮಾಡಲಾಗಿತ್ತು. ಜಾಫರ್ ಕ್ರಿಕೆಟ್ ಅಸೋಸಿಯೇಷನ್ ಆಫ್ ಉತ್ತರಾಖಂಡ್ ಜೊತೆಗೆ ಒಂದು ವರ್ಷದ ಒಪ್ಪಂದ ಕೂಡ ಮಾಡಿಕೊಂಡಿದ್ದರು. ಆದರೆ ಈಗ ಅವಧಿಗೂ ಮುನ್ನ ಜಾಫರ್ ಮುಖ್ಯ ತರಬೇತುದಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ,
ವರದಿ: ಮಂಜುನಾಥ್ ಅಜಿತ್