ಜೊತೆ ಜೊತೆಯಲಿ ಧಾರಾವಾಹಿ ನೋಡಿ ಎಚ್ಚೆತ್ತುಕೊಂಡ ಮೈಸೂರು ಜನತೆ...

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಜೊತೆ ಜೊತೆಯಲಿ" ಧಾರಾವಾಹಿ ಮೊದಲಿನಿಂದಲೂ ಸಾಕಷ್ಟು ಜನಪ್ರಾಯವಾಗಿದು ಜನರ ಮನಸು ಗೆದ್ದಿದೆ.ಈ ಧಾರಾವಾಹಿಯಲ್ಲಿ ಇತ್ತೀಚೆಗೆ ಕಸ ವಿಲೇವಾರಿ ಬಗ್ಗೆ ವಿಶೇಷವಾಗಿ ಅರಿವು ಮೂಡಿಸುವ ಕೆಲಸ ಮಾಡಲಾಗಿತ್ತು.

ಕಳೆದ ಸಂಚಿಕೆಯಲ್ಲಿ ಕಸ ವಿಂಗಡಿಸಿ ನೀಡುವುದರ ಮಹತ್ವವನ್ನು ನಾಯಕ ಆರ್ಯವರ್ಧನ್ ವಿವರಿಸುವ ದೃಶ್ಯ ಮುಡಿಬಂದಿತ್ತು.ಈ ದೃಶ್ಯ ಅದೆಷ್ಟೋ ಜನರಿಗೆ ಪ್ರಭಾವ ಬೀರಿದೆ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ.

ಈ ಧಾರಾವಾಹಿಯಲ್ಲಿ ನೀಡಿದ ಸಂದೇಶದಿಂದಾಗಿ ಮೈಸೂರಿನಲ್ಲಿ ಕಸ ವಿಂಗಡನೆ ಮಾಡಿ ನೀಡುವುದರಲ್ಲಿ ಇದುವರೆಗೆ ಉಡಾಫೆ ಮಾಡುತ್ತಿದ್ದ ನಾಗರಿಕರು ಈಗ ಎಚ್ಚೆತ್ತುಕೊಂಡಿದ್ದು ಶೇ.20 ರಷ್ಟು ಈ ನಿಟ್ಟಿನಲ್ಲಿ ಪ್ರಗತಿ ಕಂಡಿದ್ದೇವೆ ಎಂದು ಸ್ವತಃ ಮೈಸೂರು ನಗರ ಪಾಲಿಕೆ ಇಂಜಿನಿಯರ್ ಹೇಳಿಕೊಂಡಿರುವುದಾಗಿ ಧಾರಾವಾಹಿ ತಂಡ ಹೇಳಿದೆ. ಒಂದು ಧಾರಾವಾಹಿ ನೀಡಿದ ಸಂದೇಶನದಿಂದ ಇಷ್ಟೊಂದು ಬದಲಾವಣೆ ಆಗಿದೆ ಎಂದರೆ ನಿಜಕ್ಕೂ ಶ್ಲಾಘನೀಯ.