ಇ-ಕ್ಷಣ ಸು-ಕ್ಷಣ.!! ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಹೊಸ ಯೋಜನೆ
ಇ-ಕ್ಷಣ ಸು-ಕ್ಷಣ.!! ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಹೊಸ ಯೋಜನೆ
ಬೆಂಗಳೂರು : ಕಂದಾಯ ಇಲಾಖೆಯ ಆದಾಯ, ಜಾತಿ ಪ್ರಮಾಣ ಪತ್ರ ಪಡೆಯುವರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಆದಾಯ, ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ ತಕ್ಷಣವೇ ದಾಖಲೆಗಳನ್ನು ನೀಡಲು ಇ-ಕ್ಷಣ ಎಂಬ ಹೊಸ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಿದೆ.
ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಲು ಜನರಿಗೆ ತೊಂದರೆ ಆಗುತ್ತಿದನ್ನು ಗಮನಿಸಿದ ಕಂದಾಯ ಇಲಾಖೆ ಹೊಸ ಸೇವೆಯನ್ನು ರಾಜ್ಯದ ಜನರಿಗೆ ಒದಗಿಸಲು ಸಜ್ಜಾಗಿದೆ. ಇ-ಕ್ಷಣ ಎಂಬ ಹೆಸರಿನಲ್ಲಿ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದ್ದು, ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ ತಕ್ಷಣವೇ ಪ್ರಮಾಣಪತ್ರ ಪಡೆಯಬಹುದಾಗಿದೆ.
ಶಿಕ್ಷಣ ಉದ್ಯೋಗ ಸೇರಿ ವಿವಿಧ ಉದ್ದೇಶಗಳಿಗೆ ಆದಾಯ ಪತ್ರ,ಜಾತಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿದ ಕ್ಷಣಾರ್ಧದಲ್ಲೇ ಇ-ಕ್ಷಣ ದಡಿ ಜಾತಿ, ಆದಾಯ, ವಾಸಸ್ಥಳ ಪ್ರಮಾಣ ಪತ್ರ ಜನರ ಕೈಸೇರಲಿದೆ.
ಎಂದು ರಾಜ್ಯದ ಕಂದಾಯ ಇಲಾಖೆ ಹೇಳಿಕೆ ನೀಡಿದೆ.