ಎಎಮ್‌ಯುಗೆ 100ರ ಸಂಭ್ರಮ: ವಿದ್ಯಾರ್ಥಿ ಮತ್ತು ಅಧ್ಯಾಪಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ
ಅಲಿಘರ್ ಮುಸ್ಲಿಮ್ ಯುನಿವರ್ಸಿಟಿಯ ಸ್ಥಾಪನೆಯಾಗಿ 100 ವರ್ಷಗಳು ಕಳೆದ ಸಂಭ್ರಕ್ಕಾಗಿ ವಿಶ್ವವಿದ್ಯಾಲಯದಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಪರೆನ್ಸ ಮೂಲಕ ವಿದ್ಯಾರ್ಥಿ ಮತ್ತು ಅಧ್ಯಾಪಕರನ್ನು ಉದ್ದೇಶಿಸಿ ಪ್ರದಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಎಎಮ್‌ಯುನ100ನೇ ವರ್ಷದ ಸಂಭ್ರಮಾಚರಣೆಯ ಪ್ರತೀಕವಾಗಿ ಅಂಚೆ ಚೀಟಿಗಳನ್ನು ಮೋದಿ ಬಿಡುಗಡೆ ಮಾಡಿದ್ದಾರೆ .
ಎಎಮ್‌ಯುನ ವರ್ಚುವಲ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಳೆದ 50 ದಶಕಗಳಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಎಎಮ್‌ಯುನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವರಾದ ರಮೇಶ ಪೊಖ್ರಿಯಾಲ್ ಕೂಡ ವಿಡಿಯೋ ಕಾನ್ಪರೆನ್ಸ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ “ಎಎಮ್‌ಯುನ ಕ್ಯಾಂಪಸ್ ಒಂದು ನಗರವಿದ್ದಂತೆ ಎಂದು ಕೆಲವರು ನನಗೆ ಹೇಳಿದ್ದಾರೆ. ಈ ಕ್ಯಾಂಪಸ್‌ನಲ್ಲಿ ಒಂದು ಮಿನಿ ಭಾರತವೇ ಸೃಷ್ಟಿಯಾದಂತಿದೆ. ಇಲ್ಲಿ ಕಾಣುತ್ತಿರುವ ವೈವಿಧ್ಯತೆ ಕೇವಲ ಈ ವಿಶ್ವವಿದ್ಯಾಲಯದ ಶಕ್ತಿಯಲ್ಲಇದು ಇಡಿ ದೇಶದ ಶಕ್ತಿʼ ಎಂದು ಹೇಳಿದ್ದಾರೆ.
ಎಎಮ್‌ಯುಗೆ 100ರ ಸಂಭ್ರಮದ ಬಗ್ಗೆ ಮಾತನಾಡುತ್ತ ʼ ಎಎಮ್‌ಯುನ ಮಾಜಿ ವಿದ್ಯಾರ್ಥಿಗಳು ಇಂದು ಎಲ್ಲಿಗೆ ಹೋದರು ಭಾರತದ ಶ್ರೀಮಂತ ಪರಂಪರೆ ಹಾಗೂ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾರೆ. ಎಎಮ್‌ಯು ತನ್ನ ನೂರು ವರ್ಷಗಳ ಹಾದಿಯಲ್ಲಿ ಹಲವಾರು ಮೇರು ವ್ಯಕ್ತಿತ್ವಗಳನ್ನು ರೂಪಿಸಿದೆ. ಅವರಲ್ಲಿ ಆಧುನಿಕ ಮತ್ತು ವೈಜ್ಞಾನಿಕತೆಯ ವಿಚಾರಗಳನ್ನು ಮೂಡಿಸಿ ಸಮಾಜ ಹಾಗೂ ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡುವಂತೆ ಪ್ರೇರೆಪಿಸಿದೆ.
ವೈವಿಧ್ಯತೆಯಲ್ಲಿರುವ ಸಾಮರ್ಥ್ಯವನ್ನು ನಾವು ಮರೆಯಬಾರದು ಹಾಗೂ ಈ ಸಾಮರ್ಥ್ಯ ಕುಂದದಂತೆ ನೋಡಿಕೊಳ್ಳಬೇಕು. ʼಏಕ್ ಭಾರತ್, ಶ್ರೇಷ್ಟ ಭಾರತʼ ಭಾವನೆಯನ್ನು ಸಾಧಿಸಲು ನಾವು ಒಗ್ಗೂಡಿ ಕೆಲಸ ಮಾಡಬೇಕು. ದೇಶದಲ್ಲಿನ ಯಾವೊಬ್ಬ ವ್ಯಕ್ತಿಯನ್ನು ಅವರ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡದಂತಹ ಸಮಾಜ ಈಗ ಭಾರತದಲ್ಲಿ ನಿರ್ಮಾಣವಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಕನಸುಗಳನ್ನು ಸಾಧಿಸುವ ನಿಟ್ಟಿನಲ್ಲಿ ಸಮಾನವಾದ ಅವಕಾಶಗಳನ್ನು ನೀಡಲಾಗುವುದು ಎಂದು ಮೋದಿ ಭರವಸೆ ನೀಡಿದರು.
ವರದಿ: ಮಂಜುನಾಥ್ ನಾಯಕ್