ಬಿಪಿಎಲ್ ಕಾರ್ಡ್ ಇರುವವರಿಗೆ ಮನೆಯಲ್ಲೇ ಡಯಾಲಿಸಿಸ್.
ರಾಷ್ಟ್ರೀಯ ಆರೋಗ್ಯ ಮಿಷನ್ ಸಹಯೋಗದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮನೆಯಲ್ಲೇ ಡಯಾಲಿಸಿಸ್ ಯೋಜನೆ ರೂಪಿಸಿದ್ದು ಮಾರ್ಚ್ ನಿಂದ ರೋಗಿಗಳಿಗೆ ಮನೆಯಲ್ಲೇ ಡಯಲಿಸಿಸ್ ಮಾಡಿಕೊಳ್ಳಬಹುದು.ಕಿಡ್ನಿ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಮನೆಯಲ್ಲೇ ಡಯಾಲಿಸಿಸ್ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದ್ದು ಮಾರ್ಚ್ ನಿಂದ ರಾಜ್ಯದಲ್ಲಿ ಜಾರಿಯಗಲಿದೆ. ಇದರಿಂದ ರೋಗಿಗಳು ಆಸ್ಪತ್ರೆಗಳಿಗೆ ಅಲೆದಾಡುವುದು ತಪ್ಪುತ್ತದೆ.
ಮನೆಯಲ್ಲಿ ಮಾಡುವ ಡಯಾಲಿಸಿಸ್ ಗೆ ಪೆರಿಟೋನಿಯಲ್ ಡಯಾಲಿಸಿಸ್ ಹಾಗೂ ಯಂತ್ರದ ಮೂಲಕ ರಕ್ತ ಶುದ್ದೀಕರಣ ಮಾಡುವುದಕ್ಕೆ ಹಿಮೊಡಯಲಿಸಿಸ್ ಎನ್ನಲಾಗುತ್ತದೆ.
ಬಿಪಿಎಲ್ ಕಾರ್ಡ್ ಹೊಂದಿದ ರೋಗಿಗಳಿಗೆ ನೀಡುವ ತರಬೇತಿ ಮತ್ತು ದ್ರವಾಂಶ ಉಚಿತವಾಗರುತ್ತದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳು ಮತ್ತು ಅವರ ಕುಟುಂಬದವರಿಗೆ ತರಬೇತಿ ನೀಡಲಾಗುತ್ತದೆ. ಇನ್ನು ಎಪಿಎಲ್ ಕುಟುಂಬಕದ ರೋಗಿಗಳಿಗೆ ಶುಲ್ಕ ಪಾವತಿಸಬೇಕಿದೆ.ಡಯಾಲಿಸಿಸ್ ಅಗತ್ಯವಾಗಿರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ಎರಡುವಾರ ತರಬೇತಿ ನೀಡಲಾಗುವುದು.