ಕೇಂದ್ರ ಸರ್ಕಾರದಿಂದ ಪಿ.ಎಪ್ ಖಾತೆದಾರರ ಮೇಲೆ ಬರೆ ನೌಕರರಿಗೆ ಬಿಗ್ ಶ್ಯಾಕಿಂಗ್ ..!
ಭವಿಷ್ಯ ನಿಧಿ (ಇಪಿಎಫ್) ನಿಯಮಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಲು ಕೇಂದ್ರ ಸರಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಪಿಎಫ್ ಕೊಡುಗೆಯನ್ನು ಶೇಕಡಾ 12 ರಿಂದ 10 ಕ್ಕೆ ಇಳಿಸುವುದಕ್ಕೆ ಮುಂದಾಗಿದೆ ಎನ್ನಲಾಗಿದೆ.
ಪ್ರಸ್ತುತ, ಪಿಎಫ್‌ಗೆ ನೌಕರರ ಕೊಡುಗೆ 12 ಪ್ರತಿಶತವಾಗಿದ್ದು, ಮತ್ತು ಸಮಾನ ಶೇಕಡಾವಾರು ಮೊತ್ತವನ್ನು ಉದ್ಯೋಗದಾತರು ನೀಡುತ್ತಾರೆ. ಕರಡು ಇಪಿಎಫ್ ಮಸೂದೆ ಉದ್ಯೋಗಿ ಮತ್ತು ಉದ್ಯೋಗದಾತರಿಂದ ಇಪಿಎಫ್ ಕೊಡುಗೆ ದರವನ್ನು ಶೇಕಡಾ 10 ಕ್ಕೆ ಇಳಿಸಲು ಪ್ರಸ್ತಾಪಿಸಿದೆ. ಇದನ್ನು ಸದನದಲ್ಲಿ ಪರಿಚಯಿಸಲಾಗುವುದು ಅಂತ ಕೂಡ ಹೇಳಲಾಗುತ್ತಿದೆ.ಇಪಿಎಫ್ ಕೊಡುಗೆ ದರವನ್ನು 12 ಪ್ರತಿಶತದಿಂದ 10 ಪ್ರತಿಶತಕ್ಕೆ ಇಳಿಸಿದರೆ, ವ್ಯಕ್ತಿಗಳ ನಿವ್ವಳ ಮಾಸಿಕ ಆದಾಯವು ಹೆಚ್ಚಾಗುತ್ತದೆ, ಇದರಿಂದಾಗಿ ಮನೆಗೆ ತೆಗೆದುಕೊಂಡು ಹೋಗುವ ವೇತನ ಹೆಚ್ಚಳವಾಗಲಿದೆ.