ಕಾಫಿ ನಾಡಿನಲ್ಲಿ ಶುರುವಾಯ್ತು ಮಂಗನ ಕಾಯಿಲೆ ....!!
ಕಾಫಿ ನಾಡು ಚಿಕ್ಕಮಂಗಳೂರಿನಲ್ಲಿ ಮಂಗನ ಕಾಯಿಲೆ ಭೀತಿ ಮತ್ತೆ ಶುರುವಾಗಿದೆ.ಜಿಲ್ಲೆಯಲ್ಲಿ ಕಾಯಿಲೆಯ ಕೆಎಫ್ ಡಿ ವೈರಸ್ ಪತ್ತೆಯಾಗಿದ್ದು, ಮಲೆನಾಡಿಗರಲ್ಲಿ ಮಂಗನ ಕಾಯಿಲೆಯ ಆತಂಕ ತುಂಬಿದೆ.ಮಂಗನಲ್ಲಿ ಉಣ್ಣೆಯಲ್ಲಿ ಪಾಸಿಟಿವ್ ಅಂಶ ಇದೆ ಎಂಬುದು ಶಿವಮೊಗ್ಗ ಪ್ರಯೋಗಾಲಯದಿಂದ ದೃಢಪಟ್ಟಿದೆ. ಜನವರಿ 9ರಂದು ಈ ವೈರಸ್ ಪತ್ತೆಯಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 35 ಮಂಗಗಳು ಸಾವನ್ನಪ್ಪಿದವು. 18 ಮಂಗಗಳ ಅಂಗಾಂಗ ಪರೀಕ್ಷೆ ನಡೆಸಲಾಗಿತ್ತು. ಒಂದು ಮಂಗದ ದೇಹದಲ್ಲಿ ಪಾಸಿಟಿವ್ ವೈರಸ್ ಪತ್ತೆಯಾಗಿತ್ತು.ಹಿಂದೊಮ್ಮೆ ಜಯಪುರದ ಹಾಡುಗಾರು ಗ್ರಾಮದಲ್ಲಿ ಒಬ್ಬರಲ್ಲಿ ಈ ಅಂಶ ಪತ್ತೆಯಾಗಿತ್ತು. ಹೀಗಾಗಿ ಇದೀಗ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ.