ಕುಡಿತಕ್ಕೆ ಹಣ ಕೊಡದ ಮಗಳನ್ನು ಕಾಲುವೆಗೆ ನೂಕಿ ಕೊಂದ ಪಾಪಿ ತಂದೆ.!!!

ಬಳ್ಳಾರಿ:-ಬಳ್ಳಾರಿ ಜಿಲ್ಲೆಯಲ್ಲೊಂದು ಹೃದಯ ವಿದ್ರಾವಕ ಘಟನೆ ಜರುಗಿದೆ, ಮಗಳು ಮದ್ಯಸೇವಿಸಲು ಹಣ ನೀಡಲಿಲ್ಲವೆಂದು ತಂದೆಯೇ ತನ್ನ ಮಗಳನ್ನು ಕಾಲುವೆಗೆ ನೂಕಿ ಹತ್ಯೆಗೈದಿದ್ದಾನೆ.

ಕುಡಿಯಲು ಹಣ ಕೊಡುವಂತೆ ದಿನಾಲು ಪಿಡಿಸುತ್ತಿದ್ದ ಪಾಪಿ ತಂದೆ,ಇದೆ ವಿಚಾರವಾಗಿ ಸೋಮವಾರ ಕೂಡ ತಂದೆ ಮಗಳ ನಡುವೆ ತೀವ್ರ ವಾಗ್ವಾದ ನೆಡೆದಿದೆ ಇದರಿಂದ ಮನನೊಂದ ಪಲ್ಲವಿ ನಾನು ಬದುಕಿರುವುದಕ್ಕಿಂತ ಸಾಯುವುದೇ ಲೇಸು ಎಂದು ಮನೆ ಸಮೀಪವಿರುವ ಎಚ್ ಎಲ್ ಸಿ ಕಾಲುವೆ ಬಳಿ ಹೊಗಿದ್ದಾಳೆ ಮಗಳ ಹಿಂದೆಯೇ ತೆರಳಿದ ತಂದೆಯು ಕಾಲುವೆ ಬಳಿ ನಿಂತಿದ್ದ ಮಗಳನ್ನು ನೀರಿಗೆ ನೂಕಿದ್ದಾನೆ,ಈಜು ಬಾರದ ಪಲ್ಲವಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ.

ಕೊಲೆ ಮಾಡಿ ತಂದೆ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದಾನೆ.