ಲಾಕ್ ಡೌನ್ ಹಿನ್ನಲೆ ಸಂಕಷ್ಟಕ್ಕೆ ಸಿಲುಕಿರುವ ರೈತರು : ರೈತರ ಕಷ್ಟಗಳಿಗೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ : ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಅನುಮತಿ...

ಬೆಂಗಳೂರು : ದೇಶಾದ್ಯಂತ ಲಾಕ್ ಡೌನ್ ವಿಧಿಸಿರುವ ಹಿನ್ನಲೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಬೆಳೆಯನ್ನು ಕಟಾವು ಮಾಡಲಾಗದೇ , ಕಟಾವು ಮಾಡಿದ್ದರೂ ಬೇರೆಡೆ ಸಾಗಿಸಲಾಗದೇ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕಲಬುರಗಿಯಲ್ಲಿ    ಕಲ್ಲಂಗಡಿ ಬೆಳೆದಿದ್ದ ರೈತನೊಬ್ಬ ಅದನ್ನು ಸಾಗಾಟ ಮಾಡಿಸಲಾಗದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಎಲ್ಲಾ ಬೆಳವಣಿಗೆ ಹಿನ್ನಲೆ ಇಂದು ಬೆಳಿಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಗ್ರಹ ಕಚೇರಿ ಕೃಷ್ಣಾ ದಲ್ಲಿ ಸಭೆ ನಡೆಸಿ ರೈತರ ಸಮಸ್ಯೆ ಬಗೆಹರಿಸಲು ಹಲವು ನಿರ್ಧಾರಗಳನ್ನು ಕೈಗೊಂಡಿದ್ದಾರೆ. ರೈತರಿಗೆ ಆಗುತ್ತಿರುವ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ರೈತರು ತಾಳ್ಮೆಯಿಂದ ಇರುವಂತೆ ಮನವಿ ಮಾಡಿಕೊಂಡಿದ್ದಾರೆ.

ಸಾಗಾಣಿಕೆಗೆ ತಡೆಯಾಗದಂತೆ ಕ್ರಮ.......

ರಾಜ್ಯದಲ್ಲಿ ಬೆಳೆದ ಹಣ್ಣು , ತರಕಾರಿಗಳು ಪ್ರತಿ ವರ್ಷ ಬೇರೆ ರಾಜ್ಯಗಳಿಗೆ ರಫ್ತಾಗುತ್ತಿತ್ತು. ಆದ್ರೆ ಈ ಬಾರಿ ಲಾಕ್ ಡೌನ್ ಹಿನ್ನಲೆ ಸಾಗಾಟಕ್ಕೆ ತೊಂದರೆಯಾಗಿದೆ.
ರಾಜ್ಯದಲ್ಲಿ ಬೆಳೆದ ತೋಟಗಾರಿಕೆ ಊತ್ಪನ್ನಗಳು ಹಾಗೂ ತರಕಾರಿಗಳ ರಫ್ತಿಗೆ ಕ್ರಮ ಕೈಗೊಳ್ಳಲಾಗಿದೆ.
ರೈತರ ಉತ್ಪನ್ನಗಳ ಸಾಗಾಟಕ್ಕೆ ತೊಂದರೆ ಮಾಡದಂತೆ ಪೋಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು. ಇನ್ನು ರೈಲುಗಳ ಮೂಲಕ ಹೊರ ರಾಜ್ಯಗಳಿಗೆ ಹಣ್ಣು, ತರಕಾರಿಗಳನ್ನು ಸಾಗಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.