ಸೋನಿಯಾ ಗಾಂಧಿ ಪ್ರಧಾನ ಮಂತ್ರಿ ಮೋದಿ ಗೆ ಬರೆದ ಪತ್ರದಲ್ಲಿ ಏನಿದೆ..? ಈ ಸ್ಟೋರಿ ನೋಡಿ

ನವದೆಹಲಿ : ಮಹಾಮಾರಿ ಕೊರೊನಾವನ್ನು ನಿಯಂತ್ರಿಸಲು ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ವಿಧಿಸಿರುವ ಹಿನ್ನಲೆ ರೈತರಿಗೆ ಹಾಗೂ ದಿನಗೂಲಿ ಕೆಲಸಗಾರರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಅದರಲ್ಲೂ ಕೃಷಿ ಕೆಲಸಗಳಿರದ ಈ ದಿನಗಳಲ್ಲಿ ಹಳ್ಳಿಯ ಜನರು ನರೇಗಾ ಯೋಜನೆಯನ್ನೇ ನೆಚ್ಚಿಕೊಂಡಿದ್ದರು. ಆದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಸದ್ಯಕ್ಕೆ ನರೇಗಾ ಯೋಜನೆಯನ್ನು ನಿಲ್ಲಿಸಲಾಗಿದೆ.

ಈ ಕುರಿತು ಪ್ರಧಾನಿ ಮೋದಿ ಗೆ ಪತ್ರ ಬರೆದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ , ಕೃಷಿರಹಿತ ದಿನಗಳಲ್ಲಿ ಜನರು ಆದಯಕ್ಕಾಗಿ ನರೇಗಾ ಯೋಜನೆಗಳ ಮೇಲೆ ಅವಲಂಬಿತರಾಗಿದ್ದರು. ಆದ್ರೆ ಸಾಮಾಜಿಕ ಅಂತರದ ಕಾರಣಕ್ಕಾಗಿ ನರೇಗಾ ಯೋಜನೆಯನ್ನು ಸ್ಥಗಿತಗೋಳಿಸಲಾಗಿದೆ. ಆದ್ದರಿಂದ ಗ್ರಾಮೀಣ ಜನರ ನೆರವಿಗೆ ಧಾವಿಸುವಂತೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದೇ ಸಂಧರ್ಭದಲ್ಲಿ ಸೋನಿಯಾ ಗಾಂಧಿ ಪತ್ರದಲ್ಲಿ "ಲಾಕ್ ಡೌನ್ ಸರಿದು ನರೆಗಾ ಯೋಜನೆ ಪ್ರಾರಂಭವಾದ ಮೇಲೂ ತಮ್ಮ ಕೂಲಿ ಪಡೆಯಲು ಜನರು 21 ದಿನಗಳ ಕಾಲ ಕಾಯಬೇಕಾಗುತ್ತದೆ.ಆದ್ದರಿಂದ ಇಂಥ ಸಂಕಷ್ಟದ ಸಮಯದಲ್ಲಿ ಜನರಿಗೆ ನರೇಗಾ ಯೋಜನೆಯ ಕೂಲಿಯನ್ನು ಮುಂಗಡವಾಗಿ ನೀಡಿ ನಂತರದ ದಿನಗಳಲ್ಲಿ ಕೆಲಸಕ್ಕೆ ಸರಿಮಾಡಿಕೊಳ್ಳಿ" ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಇನ್ನು ಸೋನಿಯಾ ಗಾಂಧಿ ಪತ್ರಕ್ಕೆ ಕೇಂದ್ರ ಸರ್ಕಾರ ಯಾವ ರೀತಿಯಲ್ಲಿ ಪ್ರತಿಕ್ರಿಯಸಲಿದೆ ಎಂದು ಕಾದುನೋಡಬೇಕಿದೆ.