ಕೈ ಕಾಲು ಕಟ್ಟಿಹಾಕಿ ದಂಪತಿಗಳ ಬರ್ಬರ ಹತ್ಯೆ.

ವೃದ್ಧ ದಂಪತಿಗಳ ಬರ್ಬರ ಹತ್ಯೆ..

ಅಂಕೋಲಾ:-ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಮಗಟ ಗ್ರಾಮಪಂಚಾಯ್ತಿ ವ್ಯಾಪ್ತಿಯ ಆನ್ಲೆಯಲ್ಲಿ ಕೈಕಾಲು ಕಟ್ಟಿ ವೃದ್ಧ ದಂಪತಿಗಳ ಕೊಲೆ ಯಾಗಿರುವ ಘಟನೆ ನಡೆದಿದೆ.

ಗ್ರಾಮದ ನಾರಾಯಣ ಬೊಮ್ಮಯ್ಯ ನಾಯ್ಕ ಮತ್ತು ಸಾವಿತ್ರಿ ನಾಯ್ಕ , ಕೊಲೆಯಾದ ದುರ್ದೈವಿಗಳು ಆಗಿದ್ದು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿರುವ ಶಂಕೆ ಉಂಟಾಗಿದೆ. ಘಟನೆಗೆ ನಿಖರವಾದ ಕಾರಣ ಏನೆಂದು ಇನ್ನೂ ಲಭ್ಯವಾಗಿಲ್ಲ, ಈ ಕೊಲೆ ಹಳೆ ವೈಷಮ್ಯ ಅಥವಾ ದರೋಡೆ ಮಾಡುವ ಕಾರಣದಿಂದ ಆಗಿದೆ ಎಂಬುದು ಇನ್ನೂ ತಿಳಿಯಬೇಕಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅಂಕೋಲಾ ಪೊಲೀಸ್ ಠಾಣಾ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .

ಈ ಘಟನೆ ನಡೆದಿದ್ದಾದರೂ ಹೇಗೆ?

ಮನೆಯಲ್ಲಿ ಯಾರೂ ಇಲ್ಲದ ವೇಳೆ ನೋಡಿ ದುಷ್ಕರ್ಮಿಗಳು ಹೊಂಚುಹಾಕಿ  ವೃದ್ಧ ದಂಪತಿಗಳನ್ನು, ಕೈ ಕಾಲು ಕಟ್ಟಿ ಹಾಕಿ ಕೊಲೆ ಮಾಡಿದ್ದಾರೆ. ಈ ಅಮಾನುಷ ಘಟನೆಯ ಸಾಕ್ಷಿಗಳನ್ನು ಕಲೆಹಾಕುತ್ತಿರುವ ಅಂಕೋಲಾ  ಪೊಲೀಸರು ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಹೇಳಿಕೆ ನೀಡಿದ್ದರು.