ಕೊಪ್ಪಳದ ಕುಷ್ಟಗಿಯಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ.......
ಕುಷ್ಟಗಿ ಪಟ್ಟಣದ ಸಂತ ಶಿಶುನಾಳ ಶರೀಫ ನಗರದಲ್ಲಿ ಮಾನ್ಯ ಅಮರೇಗೌಡ ಪಾಟೀಲ್ ಬಯ್ಯಾಪುರ ಶಾಸಕರು ಕುಷ್ಟಗಿ ಮಗುವಿಗೆ ಲಸಿಕೆ ಹಾಕುವುದರ ಮೂಲಕ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದ ಕುರಿತು ಆನಂದ ಗೋಟೂರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಾನ್ಯ ಅಮರೇಗೌಡ ಪಾಟೀಲ್ ಬಯ್ಯಾಪುರ ಶಾಸಕರು ನೆರದಿದ್ದ ಸಾರ್ವಜನಿಕರನ್ನುದ್ದೇಶಿಸಿ ತಮ್ಮ ಆರೋಗ್ಯವಂತ ಮಗು ದೇಶದ ಸಂಪತ್ತು.
ಆರೋಗ್ಯ ಇಲಾಖೆಯು ಕಾಲ ಕಾಲಕ್ಕೆ ನೀಡುವ ಆರೋಗ್ಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ತಮ್ಮ ಪ್ರದೇಶವನ್ನು ಗಂಡಾಂತರ ಪ್ರದೇಶವೆಂದು ಪರಿಗಣಿಸಲ್ಪಟ್ಟಿದೆ.ನಮ್ಮ ದೇಶವು ಪೋಲಿಯೊ ಮುಕ್ತವಾಗಿದ್ದು,ಪಕ್ಕದ ಪಾಕಿಸ್ತಾನ,ಅಫ್ಘಾನಿಸ್ತಾನ ದೇಶದಲ್ಲಿ ಪೋಲಿಯೋ ಪ್ರಕರಣಗಳು ಪತ್ತೆಯಾಗಿರುವುದರಿಂದ,ನಮ್ಮ ನಮ್ಮ ದೇಶದಲ್ಲಿ ಈ ವರ್ಷ ಒಂದು ಸುತ್ತಿನ ಪೋಲಿಯೋ ಕಾರ್ಯಕ್ರಮ ದೇಶವ್ಯಾಪಿ ಹಮ್ಮಿಕೊಂಡಿದ್ದು,ಕಾರಣ ಕುಷ್ಟಗಿ ತಾಲೂಕಿನ 39277 ಮಕ್ಕಳಿಗೆ ಲಸಿಕೆಯನ್ನು ಹಾಕುವ ಗುರಿ ಹೊಂದಿದ್ದು 179 ಬೂತ್ ಗಳನ್ನು ತೆರೆಯಲಾಗಿದೆ.,
364 ಜನ ಲಸಿಕಾದಾರರಿದ್ದು,ಸುಮಾರು 37 ಜನ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಈ ಸಂದರ್ಭದಲ್ಲಿ ಮಾನ್ಯ ಡಾ.ಆನಂದ್ ತಾಲೂಕ ಆರೋಗ್ಯ ಅಧಿಕಾರಿಗಳು ಕುಷ್ಟಗಿ,ಡಾ|| ಚಂದ್ರಕಾಂತ್ ಬಿ ಮಂತ್ರಿ ಮುಖ್ಯ ವೈದ್ಯಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಕುಷ್ಟಗಿ,ಮಾನ್ಯ ಪುರಸಭೆ ಮುಖ್ಯಾಧಿಕಾರಿಗಳು, ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಹಾಗೂ ನಗರದ ಸಾರ್ವಜನಿಕರು ಇದ್ದರು.
ವರದಿ : ಶರಣಪ್ಪ ಕುಂಬಾರ ತಾವರಗೇರಾ