SSLC ಪರೀಕ್ಷೆ ಅಂತಿಮವಲ್ಲ. ಜೀವನದಲ್ಲಿ ಹಲವು ಪರೀಕ್ಷೆಗಳು ಬರುತ್ತವೆ
ಇಂದು ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಸಲಿದ್ದು, ಈ ಬಗ್ಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಮೂರು ವರ್ಷಗಳ ಹಿಂದೆ ಪ್ರಧಾನಮಂತ್ರಿ ಈ ಕಾರ್ಯಕ್ರಮ ಆರಂಭಿಸಿದ್ರು. ಇಡೀ ಪ್ರಪಂಚದಲ್ಲಿ ಪ್ರಧಾನಿಯೊಬ್ಬರು ವಿದ್ಯಾರ್ಥಿಗಳೊಡನೆ ಮಾತನಾಡಿ ಪರೀಕ್ಷೆ ಭಯವನ್ನು ತಗ್ಗಿಸುವ ಕೆಲಸ ಮಾಡುತ್ತಿರೋದು ಮೋದಿಯವರೊಬ್ರೆ ಎಂದು ಹೇಳಿದ್ದಾರೆ.
ರಾಷ್ಟ್ರಗೀತೆ ನಮಗೆ ಎಷ್ಟು ಪ್ರೇರಣೆ ನೀಡುತ್ತೋ ನಾಡಗೀತೆಯೂ ನಮಗೆ ಮುಖ್ಯವಾಗಿರಬೇಕು.
ಅದನ್ನು ಯಾರೋ ಬೀದಿಯಲ್ಲಿ ಹೋಗುವವರು ಬರೆದಿಲ್ಲ. ರಾಷ್ಟ್ರಕವಿ ಕುವೆಂಪು ಬರೆದ ಈ ಹಾಡಿನಲ್ಲಿ ನಾಡಿನ ಪ್ರಮುಖ ಅಂಶಗಳನ್ನು ಕಾಣುತ್ತೇವೆ. ಅಂತಹ ಗೀತೆಗಳನ್ನು ಹಾಡುವಾಗ ನಗಬಾರದು ನಾವು ಭಾರತೀಯರು, ಕನ್ನಡಿಗರು. ಇವತ್ತು ಮೋದಿಯವರು ದೆಹಲಿಯಲ್ಲಿ 1050 ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಕರ್ನಾಟಕದ ಸಣ್ಣ ಪುಟ್ಟ ಗ್ರಾಮಗಳ 42 ವಿದ್ಯಾರ್ಥಿಗಳು ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಪರೀಕ್ಷೆ ಬಗೆಗಿನ ಭಯ ತೊಲಗಿಸಲು ಈ ಕಾರ್ಯಕ್ರಮ ನಡೆಸಲಾಗ್ತಿದೆ ಎಂದರು.
ಅಲ್ಲದೇ, ಮೋದಿಯವರು ಪರೀಕ್ಷೆ ಭಯ ಹೋಗಲಾಡಿಸಲು ಎಕ್ಸಾಮಿನೇಷನ್ ವಾರಿಯರ್ಸ್ ಎಂಬ ಬುಕ್ ಬರೆದಿದ್ದಾರೆ. ಅದನ್ನು ಕನ್ನಡಕ್ಕೆ ಅನುವಾದಿಸಿ ಮಕ್ಕಳಿಗೆ ತಲುಪಿಸುವ ಕಾರ್ಯ ಮಾಡುತ್ತೇವೆ. ಶಾಂತ ವಾತಾವರಣದಲ್ಲಿ ಪರೀಕ್ಷೆ ತೆಗೆದುಕೊಳ್ಳುವುದು. ಪರೀಕ್ಷೆಯನ್ನು ಹಬ್ಬದಂತೆ ಆಚರಿಸುವುದನ್ನು ಮಕ್ಕಳಿಗೆ ಕಲಿಸಬೇಕು. SSLC ಪರೀಕ್ಷೆ ಅಂತಿಮವಲ್ಲ. ಜೀವನದಲ್ಲಿ ಹಲವು ಪರೀಕ್ಷೆಗಳು ಬರುತ್ತವೆ. ಅವುಗಳನ್ನು ಧೈರ್ಯದಿಂದ ಎದುರಿಸುವಂತೆ ಮಾಡಲು ಮೋದಿ ಈ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದರು.