ರಾಜ್ಯಕ್ಕಾದ ಅನ್ಯಾಯವನ್ನು ಸರಿಪಡಿಸುವಂತೆ ನಿರ್ಮಲಾ ಸಿತಾರಾಮನ್ ಗೆ ಮನವಿ...

ದೆಹಲಿ : ಅನುದಾನ ಹಂಚಿಕೆ ವಿಷಯದಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ಅದನ್ನು ಸರಿಪಡಿಸುವಂತೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರ ನಿಯೋಗ,ಹಣಕಾಸು ಸಚಿವೆ ನಿರ್ಮಲಾ ಸಿತಾರಮನ್ ರನ್ನು ಭೇಟಿಯಾಗಿ ಮನವಿ ಮಾಡಿಕೊಂಡರು.

ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದ ನಿಯೋಗ ದೆಹಲಿಯಲ್ಲಿ ಗುರುವಾರ ನಿರ್ಮಲಾರನ್ನು ಭೇಟಿ ಮಾಡಿತು.

ಕರ್ನಾಟಕ ರಾಜ್ಯವು ನೇರ ಹಾಗೂ ಪರೋಕ್ಷ ತೆರಿಗೆಯ ಮೂಲಕ ಸುಮಾರು 1.61 ಲಕ್ಷ ಕೋಟಿಯನ್ನು ಕೇಂದ್ರಕ್ಕೆ ನೀಡುತ್ತಿದೆ.ಆದರೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನದಲ್ಲಿ ಅನ್ಯಾಯವಾಗಿದೆ. ಇದರ ಜೊತೆಗೆ ಮುಂದಿನ ಎರಡೂ ವರ್ಷಗಳಲ್ಲಿ ಕೇಂದ್ರದ ತೆರಿಗೆ  ಪಾಲನಲ್ಲಿ  ರಾಜ್ಯಕ್ಕೆ ಸುಮಾರು 20,000 ಕೋಟಿ ಕಡಿತವಾಗಲಿದ್ದು , ಇದನ್ನು ಸರಿಪಡಿಸುವಂತೆ  ಮನವಿ  ಮಾಡಲಾಗಿದೆ.