ಕೊರಾನಾ ಗೆ ಬಲಿಯಾದ ಚಿಕನ್ :ಕೆ.ಜಿ.ಗೆ 8ರೂ..
ಕೊರೊನೋ ಮಹಾ ಮಾರಿ ಜಾಗತಿಕ ಪಿಡುಗಾಗಿ ಪರಿಣಮಿಸಿದೆ.ಮನುಷ್ಯರ ಮೇಲೆ ವ್ಯತಿರಿಕ್ತವಾಗಿ ಕಾಡಿದ್ದ ಕೋವಿಡ್ ವೈರಸ್ ಇದೀಗ ಕೋಳಿ ಉದ್ಯಮ ನೆಲಕಚ್ಚುವಂತೆ ಬಾಧಿಸಿದೆ .
ಬೆಲೆ ಇಲ್ಲದೆ ಕಂಗಾಲಾಗಿರುವ ಕೋಳಿ ಫಾರಂ ಮಾಲೀಕರು ಸಾವಿರಾರು ಕೋಳಿಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ.
ಕೊಲಾರ,ಶಿವಮೊಗ್ಗ ,ಬೆಳಗಾವಿ ಸೇರಿದಂತೆ ಅನೇಕ ಕಡೆಗಳಲ್ಲಿ ಸಾವಿರಾರು ಕೋಳಿಗಳನ್ನು ಸಮಾಧಿ ಮಾಡಲಾಗಿದೆ.ಇನ್ನು ಲಾರಿಗಳಲ್ಲಿ ಬೀದಿ ಬೀದಿಗೆ ಹೋಗಿ ಕಡಿಮೆ ಬೆಲೆಗೆ ಕೋಳಿ ಮಾರಾಟ ಮಾಡಲಾಗುತ್ತಿದೆ .
೧೦,೨೦ ರೂಪಾಯಿಗೆ ಕೋಳಿ ಮಾರಾಟ ಮಾಡುತ್ತಿದ್ದರು ಖರೀದಿಸುವವರೇ ಇಲ್ಲವಾಗಿದ್ದಾರೆ.
ಕೊರೊನೊ ಮತ್ತು ಹಕ್ಕಿ ಜ್ವರದ ಭೀತಿಯಿಂದ ಚಿಕನ್ ಬೆಲೆ ಪಾತಾಳಕ್ಕೆ ಕುಸಿದಿದೆ. ಶಿವಮೊಗ್ಗದಲ್ಲಿ ಕೆಜಿಗೆ 25 ರೂಪಾಯಿ ವರೆಗೂ ಇದ್ದ ದರ ಈಗ 8 ರೂಪಾಯಿಗೆ ಕುಸಿದಿದೆ ಎಂದು ಹೇಳಲಾಗಿದೆ.