ಸಾಹಸ ಸಿಂಹ ನಮ್ಮನ್ನಗಲಿ ಇಂದಿಗೆ 10 ವರ್ಷ....ನಿವು ನಮ್ಮೆದೆಯ ನಂದಾದೀಪ ಎಂದು ಸುದೀಪ್ ಟ್ವಿಟ್.
ಸಾಹಸ ಸಿಂಹ ವಿಷ್ಣುವರ್ಧನ್ ನಮ್ಮನ್ನು ಅಗಲಿ ಇಂದಿಗೆ 10 ವರ್ಷಗಳು ಕಳೆದಿವೆ. ಇಡೀ ಕನ್ನಡ ಚಿತ್ರರಂಗ ಇಂದು ಅವರನ್ನು ಸ್ಮರಿಸಿದೆ.
ಮೈಸೂರಿನ ಎಚ್.ಡಿ. ಕೋಟೆ ರಸ್ತೆಯಲ್ಲಿರುವ ಉದ್ಬೂರು ಕ್ರಾಸ್ ಬಳಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗುತ್ತಿದೆ. ಇಂದು, ವಿಷ್ಣುವರ್ಧನ್ ಪತ್ನಿ ಭಾರತಿ, ಅಳಿಯ ಅನಿರುದ್ಧ್ ಅಲ್ಲಿಗೆ ತೆರಳಿ ವಿಷ್ಣುವರ್ಧನ್ ಅವರಿಗೆ ನಮನ ಸಲ್ಲಿಸಲಿದ್ದಾರೆ.
ಇನ್ನು ಟ್ವೀಟ್ ಮಾಡುವ ಮೂಲಕ ಅನೇಕರು ವಿಷ್ಣುವನ್ನು ನೆನೆದಿದ್ದಾರೆ. ಸಾಹಸ ಸಿಂಹ ಅವರನ್ನು ಸ್ಮರಿಸಿರುವ ಕಿಚ್ಚ ಸುದೀಪ್, “ಅಪ್ಪಾಜಿ... ಇಂದು ನಿಮ್ಮ 10ನೇ ಪುಣ್ಯಸ್ಮರಣೆ. ಆದರೆ,ಮರೆತವರಿಗೆ ಮಾತ್ರ ಸ್ಮರಣೆ. ನೀವು ನಮ್ಮೆದೆಯ ನಂದಾದೀಪ. ಈ 10 ವರ್ಷಗಳಲ್ಲಿ ಒಂದೇ ಒಂದು ದಿನವೂ ಈ ನಾಡು, ಚಿತ್ರರಂಗ, ನಿಮ್ಮ ಅಭಿಮಾನಿಗಳು ಮತ್ತು ನಾನು ನಿಮ್ಮನ್ನು ಮರೆತೇ ಇಲ್ಲ. ನಿಮ್ಮ ಹೆಸರು ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತಲೇ ಇದೆ. ಆ ಬೆಳಕು ಎಲ್ಲರಿಗೂ ದಾರಿದೀಪವಾಗಿದೆ,” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.